ರಶ್ಮಿ ಬಿ.ವಿ ಅವರಿಗೆ ಪಿಎಚ್.ಡಿ ಪದವಿ ಘೋಷಣೆ

ಬಳ್ಳಾರಿ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಬಳ್ಳಾರಿ ನಗರ ಮೂಲದ ರಶ್ಮಿ ಬಿ.ವಿ ಅವರು ಪಿಎಚ್‌ಡಿ ಪದವಿ ಪಡೆದಿದ್ದಾರೆ.
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾವು ರಶ್ಮಿ ಅವರ ಸಂಶೋಧನಾ ಪ್ರಭಂದಕ್ಕೆ ಡಾಕ್ಟರೇಟ್ ಪದವಿ ಘೋಷಿಸಿದೆ.

ಮದ್ರಾಸ ಹಿಂದಿ ಸಾತ್ನಕೋತರ ವಿಭಾಗದ ಡಾ.ಶಕೀಲಾ ಮುಸ್ತಫ ಅವರ ಮಾರ್ಗದರ್ಶನದಲ್ಲಿ “ನಯಿ ಸದಿ ಕೇ ಕಾವ್ಯ ಮೇ ಪರ್ಯಾವರಣ್ ಚೇತನಾ” ಎಂಬ ಮಹಾಪ್ರಬಂಧ ಮಂಡನೆಗೆ ಡಾಕ್ಟರ್ ಆಫ್ ಪಿಲಾಸಫಿ ಪದವಿಯನ್ನು ಘೋಷಣೆ ಮಾಡಿದೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.

ರಶ್ಮಿ ಅವರು ನಗರದ ಡಿಎಆರ್ ಎ.ಆರ್.ಎಸ್.ಐ ತಿಪ್ಪೇಸ್ವಾಮಿ ಅವರ ಪತ್ನಿ. ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ವೆಂಕೋಬಪ್ಪ ಭಾವಿಕಟ್ಟಿ ಮತ್ತು ಶೋಭಾ ಭಾವಿಕಟ್ಟಿ ದಂಪತಿಗಳ ಪುತ್ರಿ. ರಶ್ಮಿ ಅವರ ಈ ಸಾಧನೆಗೆ ತಂದೆ, ತಾಯಿ, ಪತಿ, ಕುಟುಂಬಸ್ಥರು ಹಾಗೂ ಆಪ್ತರು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *