Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೯೭೧, ಕವಿಯಿತ್ರಿ: ವೀಣಾ ಶ್ರೀನಿವಾಸ್, ಮಧುಗಿರಿ, ಕವನದ ಶೀರ್ಷಿಕೆ: ಕೊಡೆಗಳು (ಶಿಶು ಗೀತೆ) - Karnataka Kahale

ಅನುದಿನ ಕವನ-೯೭೧, ಕವಿಯಿತ್ರಿ: ವೀಣಾ ಶ್ರೀನಿವಾಸ್, ಮಧುಗಿರಿ, ಕವನದ ಶೀರ್ಷಿಕೆ: ಕೊಡೆಗಳು (ಶಿಶು ಗೀತೆ)

ಕೊಡೆಗಳು  (ಶಿಶುಗೀತೆ)

ಬರುತಿದೆ ಇಳೆಗೆ ಮಳೆ..
ಬಣ್ಣ ಬಣ್ಣದ ಛತ್ರಿಗಳೆ
ಎಲ್ಲೆಡೆ ಈಗ ಅರಳಿವೆ..

ಮುದುಡಿ ಮಲಗಿದ್ದ ಕೊಡೆಗಳಿಗೆ
ಬಂದಿದೆ ಈಗ ಭಾರಿ ಬೆಲೆ
ಎಲ್ಲೆಡೆ ಈಗ ಮೆರೆದಿವೆ…

ಕೆಂಪು, ಹಳದಿ , ನೀಲಿ
ಹಸಿರು, ಕಪ್ಪು ಜೊತೆಯಲಿ..
ಇನ್ನೂ ಹಲವು ವರ್ಣಗಳಲಿ…

ರಸ್ತೆಯ ತುಂಬಾ ಕಂಗೊಳಿಸಿವೆ…
ಮಳೆಯಲಿ ಮಿಂದು ಸಾಗಿವೆ..
ಹಿಡಿದವರನು ರಕ್ಷಿಸಿವೆ…

ನಿನ್ನ ಹಿಡಿದವರು ಮಳೆಗೆ ನೆನೆಯರು…
ಬಿಸಿಲು ,ಮಳೆಗಷ್ಟೆ ನಿನ್ನ ನೆನೆಯುವರು…
ಮೂಲೆಯಲಿ ಮತ್ತೆ ಮುದುಡಿಡುವರು.

-ವೀಣಾ ಶ್ರೀನಿವಾಸ್, ಮಧುಗಿರಿ
—–