Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೯೮೦, ಕವಿ: ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ: ಬುದ್ಧ... - Karnataka Kahale

ಅನುದಿನ ಕವನ-೯೮೦, ಕವಿ: ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ: ಬುದ್ಧ…

ಬುದ್ದ…

ಬುದ್ದ
ನಮ್ಮ ನಿದ್ದೆಯನ್ನು ಕದ್ದ
ಬದುಕನ್ನು ಗೆದ್ದ…

ಸದಾ
ಚಲನಶೀಲ
ಲವಲವಿಕೆ
ನಮ್ಮ ಇರುವಿಕೆ
ಗುರುತಿಸುವಿಕೆ
ಬುದ್ದ…

ಎಲ್ಲವೂ ಶೂನ್ಯ
ನಗಣ್ಯ
ನಮಗೆ ನಾವೇ ಧನ್ಯ-
-ರಾಗಬೇಕಾದರೆ ಬೇಕು
ನಿತ್ಯಸತ್ಯದ ದಾರಿಗೆ ಬುದ್ದ…

ಕಾರುಣ್ಯ
ಹೃದಯ,
ತೇಜಸ್ಸು
ಮೊಗ,
ಹೊಳೆಯುವ
ನಿತ್ಯ ಸುಂದರ
ವಸುಂಧರ
ಬುದ್ದ…

ಭೂಮಿಯು ಮೆಚ್ಚಿ
ಬಾನದು ಅಪ್ಪಿ
ಹುಣ್ಣಿಮೋತ್ಸಾಹ ತಾರೆಗೊಂಚಲು
ಬೆಳಕ ಹೂ ಬಟ್ಟಲು
ತಾಯ್ನೆಲವ ವ್ಯಾಪಿಸಿದ
ಬೆಳ್ಳಿ ಬೆಳಕ ತೊಟ್ಟಿಲು
ಬುದ್ದ…

  • -ಸಿದ್ದುಜನ್ನೂರ್, ಚಾಮರಾಜ ನಗರ
  1. *****