Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೯೯೩, ಕವಿಯಿತ್ರಿ: ಲಾವಣ್ಯ ಪ್ರಭ, ಮೈಸೂರು, ಚಿತ್ರಕೃಪೆ:ಸಿದ್ಧರಾಮ‌ ಕೂಡ್ಲಿಗಿ - Karnataka Kahale

ಅನುದಿನ ಕವನ-೯೯೩, ಕವಿಯಿತ್ರಿ: ಲಾವಣ್ಯ ಪ್ರಭ, ಮೈಸೂರು, ಚಿತ್ರಕೃಪೆ:ಸಿದ್ಧರಾಮ‌ ಕೂಡ್ಲಿಗಿ

ನಿಶಬ್ದ ಇರುಳಿನಾಗಸದಲ್ಲಿ ಅರಳುತ್ತಿದೆ
ಬೆಳ್ಳಿ ಬೆಳಕಿನ ಪ್ರೇಮ
ಮನದ ಸದ್ದು ಗದ್ದಲಗಳಿಗೆಲ್ಲಾ ತೆರೆ ಎಳೆದು
ಬೆಳದಿಂಗಳ ನಗೆ ಆಕಾಶ ಆವರಿಸುವಾಗ
ಈ ನೆಲದ ಮಲ್ಲಿಗೆಯ ದಳದಳದಲ್ಲೆಂಥಾ
ಸಂಭ್ರಮ!

ರಥವೇರಿ ಕೆಳಗಿಳಿದು ಈ ಹೂವ
ಜೊತೆಗೊಯ್ಯುತ್ತಿರುವನು ಭೂಮಿಸಖ
ಪಾಲ್ಗಡಲ ತುಂಬೆಲ್ಲಾ…. ಪ್ರಾಣಸುಖ….

ಕನಸುಗಳ ನಕ್ಷತ್ರವೀಗ ಜೋಕಾಲಿ ಕಟ್ಟಿ
ಜೀಕುತ್ತಿದೆ ಈ ಜೀವ ,ಆ ಜೀವದೊಳಗೇ
ಮುಚ್ಚಿದ ಕಣ್ಣರೆಪ್ಪೆಗಳಲ್ಲಿರುವುದು….
ಕವಿತೆಯ ಘಮವೇ?
ಚಂದಿರನ ಬಿಂಬವೇ ?!


-ಲಾವಣ್ಯ ಪ್ರಭಾ, ಮೈಸೂರು
—–