ಅನುದಿನ ಕವನ-೧೦೨೪, ಕವಿ: ಪಾಮುಚ(ಪಾತಮುತ್ತಕಹಳ್ಳಿ ಮು ಚಲಪತಿಗೌಡ) ಚಿಕ್ಕಬಳ್ಳಾಪುರ, ಕವನದ ಶೀರ್ಷಿಕೆ: ಮೊಬೈಲು ಹುಚ್ಚು(ಶಿಶುಗೀತೆ)

ಮೊಬೈಲು ಹುಚ್ಚು
(ಶಿಶುಗೀತೆ)

ಅಮ್ಮನು ಅನ್ನವ
ತಿನಿಸಲು ಬರಲು
ಮೊಬೈಲು ಕೈಗೆ
ನೀಡದೆ ಇರಲು

ಊಟವ ಬೇಡೆಂದು
ರಚ್ಚೆ ಹಿಡಿವಳು
ಮೊಬೈಲ್ ತೋರುತ
ತುತ್ತನು ಇಡಲು

ಬೊಂಬೆಯ ನೋಡುತ
ನುಂಗುವಳು
ಸ್ಕ್ರೀನನು ಮೇಲೆ
ತಳ್ಳುವಳು

ವಿಡಿಯೋ ಕಾಲು
ಮಾಡುವಳು
ಅಜ್ಜಿ ತಾತನ
ನಗಿಸುವಳು

ಚಂದ ಮಾಮನ
ಸುಳಿವಿಲ್ಲ
ಗುಬ್ಬಿ ಗೂಗೆಯ
ಪರಿಚಯವಿಲ್ಲ

ಮೊಬೈಲು ಮಾಯೆಯ
ಮಡಿಲಲ್ಲಿ
ತರತರ ಖಾಯಿಲೆ
ಒಡಲಲ್ಲಿ

ಮೊಬೈಲು ಹುಚ್ಚನ
ಬಿಡಿಸದೆ ಹೋದರೆ
ಮುಂದೆ ಕಾದಿದೆ
ಆರೋಗ್ಯ ತೊಂದರೆ

-ಪಾಮುಚ(ಪಾತಮುತ್ತಕಹಳ್ಳಿ ಮು ಚಲಪತಿಗೌಡ)
ಚಿಕ್ಕಬಳ್ಳಾಪುರ
—–

Leave a Reply

Your email address will not be published. Required fields are marked *