Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೧೦೩೫, ಕವಿ: ಎ.ಎನ್.ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ಕನ್ನಡವೆಂದರೆ....ಕವನ ವಾಚನ: ವೈಷ್ಣವಿ, ವಿಜಯಪುರ - Karnataka Kahale

ಅನುದಿನ ಕವನ-೧೦೩೫, ಕವಿ: ಎ.ಎನ್.ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ಕನ್ನಡವೆಂದರೆ….ಕವನ ವಾಚನ: ವೈಷ್ಣವಿ, ವಿಜಯಪುರ

“ಇದು ಬರಿದೆ ಹನಿಗವಿತೆಯಲ್ಲ. ಕನ್ನಡ ಹೃದಯಗಳ ಭಾವಪ್ರಣತೆ. ಜೀವ-ಭಾವಗಳ ಬೆಳಕಿನ ಅಕ್ಷರಪ್ರಣತೆ. ಒಪ್ಪಿಸಿಕೊಳ್ಳಿ…”

– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ಕನ್ನಡವೆಂದರೆ….

ಕನ್ನಡವೆಂದರೆ ಅಲ್ಲ ಬರಿದೆ ನುಡಿ..
ನನ್ನೆದೆಯ ಭಾವ-ಭಾಷ್ಯಗಳ ಗುಡಿ
ನರನರಗಳ ಮಿಡಿತದ ಜೀವನಾಡಿ
ಉಸಿರು ಉಸಿರಿನ ಸ್ವರದಾಂಗುಡಿ.!

ಕನ್ನಡವೆಂದರೆ ಅಲ್ಲ ಪದ ಶಬ್ಧಗಳ ಶಕ್ತಿ
ಮುಕ್ಕೋಟಿ ಕನ್ನಡಿಗರ ಭಾವಾಭಿವ್ಯಕ್ತಿ
ಕರುನಾಡ ಮನೆ-ಮನೆ ಬೆಳಗುವ ದೀಪ್ತಿ
ಜೀವ-ಜೀವನಗಳ ನಿತ್ಯ ಸತ್ಯ ಸ್ಫೂರ್ತಿ.!

-ಎ.ಎನ್.ರಮೇಶ್. ಗುಬ್ಬಿ.