ಬಳ್ಳಾರಿ ವಿಎಸ್ ಕೆ ವಿವಿಯಲ್ಲಿ ಗಮನ ಸೆಳೆದ ಭೀಮಾ ಕೋರೆಗಾಂವ್ ವಿಜಯೋತ್ಸವ

ಬಳ್ಳಾರಿ, ಜ. 2: ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಭೀಮಾ ಕೋರೆಗಾಂವ್ ಕದನ ವಿಜಯೋತ್ಸವವನ್ನು ಆಚರಿಸಿತು.
ಸೋಮವಾರ ಸಂಜೆ ವಿವಿ ಆವರಣದಲ್ಲಿರುವ ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿ ಬಳಿ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ವಿವಿ ಪ್ರಭಾರಿ ಕುಲಪತಿ ಪ್ರೊ. ಅನಂತ ಝಂಡೇಕರ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕುಲ ಸಚಿವ ರುದ್ರೇಶ್, ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕಿ ಗೌರಿ ಮಾಣಿಕ್, ಸಮಾಜ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಂದ್ರ ಪ್ರಸಾದ್, ವಿದ್ಯಾರ್ಥಿ ಬಂಧುತ್ವ ವೇದಿಕೆಯ ಮುಖಂಡ ಶಿವಪುತ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಭೀಮಾ ಕೋರೆಗಾಂವ್ ಕದನ ವಿಜಯೋತ್ಸವ ಕುರಿತು ಇತಿಹಾಸ ವಿಭಾಗದ ಡಾ. ತಿಪ್ಪೇಸ್ವಾಮಿ ಅವರು ವಿಶೇಷ ಉಪನ್ಯಾಸ ನೀಡಿದರು.
ವಿವಿಧ ವಿಭಾಗಗಳ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜಯೋತ್ಸವದ ಅಂಗವಾಗಿ ದೀಪ‌ ಬೆಳಗಿ ಸಂಭ್ರಮಿಸಿದರು.
——

Leave a Reply

Your email address will not be published. Required fields are marked *