ಅನುದಿನ ಕವನ-೧೧೩೭, ಕವಿ: ಟಿ.ಪಿ ಉಮೇಶ್, ಹೊಳಲ್ಕೆರೆ, ಚಿತ್ರದುರ್ಗ, ಕವನದ ಶೀರ್ಷಿಕೆ: ನಿನ್ನ ಹೃದಯದಲಿ….

ನಿನ್ನ ಹೃದಯದಲಿ…

ಬರೆದದ್ದೆಲ್ಲ ಅಳಿಸುವುದು ನಿನ್ನ ಕಣ್ಣೀರಿಗೆ!
ಅಳಿಸುವುದನ್ನೇಕೆ ಬರೆಯಲಿ?
ನಿನ್ನ ನಗುವ ಬರೆಯಲೆ?
ನಗಿಸುತ ನಿನ್ನ ಹೊತ್ತು ತಿರುಗಲೆ?

ಬರೆದದ್ದೆಲ್ಲ ಸುಡುವುದು ನಿನ್ನ ಕಣ್ಣ ಕಿಡಿಗೆ!
ಕಿಡಿಯಾಗುವುದನ್ನೇಕೆ ಬರೆಯಲಿ?
ನಿನ ಕಾಡಿಗೆಯ ಬರೆಯಲೆ?
ಕಾಡಿಸುತ ನಿನ್ನ ಹಿಂದೆ ಓಡಾಡಲೆ?

ಬರೆದದ್ದೆಲ್ಲ ಹರಿಯುವುದು ನಿನ್ನ ಕೈಗಳೆ!
ಹರಿಯುವುದನ್ನೇಕೆ ಬರೆಯಲಿ?
ನಿನ ಹಸ್ತಸ್ಪರ್ಶವ ಬರೆಯಲೆ?
ಹಸ್ತಗಳಲಿ ಬೆರೆತು ನಿನ ಸೇರಿಬಿಡಲೆ?

ಬರೆದದ್ದೆಲ್ಲ ನೋವ ನೀಡುವುದೆ ಹೃದಯಕೆ!
ನೋಯುವುದನೇಕೆ ಬರೆಯಲಿ?
ನಿನ ಸವಿ ಹೃದಯವ ಬರೆಯಲೆ?
ಹೃದಯದಲಿ ಅಡಗಿ ನಿನ್ನೊಳಿದ್ದುಬಿಡಲೆ?!


-ಟಿ.ಪಿ ಉಮೇಶ್, ಹೊಳಲ್ಕೆರೆ, ಚಿತ್ರದುರ್ಗ

Leave a Reply

Your email address will not be published. Required fields are marked *