ಅನುದಿನ ಕವನ-೧೨೮೪, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ,

ನೀನು ಚಂದ ಬೆಳಕು
ನಮ್ಮ ಧರೆಗೆ
ಭಾರತ ಭೂಮಿಗೆ
ನಿನ್ನಿಂದಾನೆ ಶ್ರೇಷ್ಠ ಬದುಕು
ಜನಕೆ ನಾಡಿಗೆ
ಸಿಕ್ಕಿದೆ ನಮಗೆ
ನೀನು ನಡೆದ ಧರಣಿ
ನಮ್ಮ ಕಾಯುವ ಸದ್ಗುಣಿ
ಜೈ ಭೀಮ ತೋರಿದರು ನಿಮ್ಮ ದಾರಿ
ನಿನ್ನಿಂದಲೇ ಸಿಕ್ಕದೆ ನಮಗೆ ಸಮತೆ ಜಯಭೇರಿ…

ನಿತ್ಯ ಸತ್ಯ ನಮ್ಮ ಸಂಸ್ಕೃತಿ
ಬುದ್ಧಂ ಶರಣಂ ಗಚ್ಛಾಮಿ ನಮ್ಮ ಸದ್ಗತಿ
ಕಳೆದೆ ಮೌಡ್ಯ ನೀನೆ ಶಾಂತಿ
ಧಮ್ಮಂ ಶರಣಂ ಗಚ್ಛಾಮಿ ನಮ್ಮ ಪ್ರೀತಿ
ಎಲ್ಲರೊಂದೆ ಅದು ನೀತಿ
ಸಂಘಂ ಶರಣಂ ಗಚ್ಛಾಮಿ ನಮ್ಮ ಶಕುತಿ
ನೆರಳಿನಂತೆ ನೀನು ವಿಶಾಲ ಆಲ
ಹರಡಿದೆ ನೀ ಜಗದಗಲ ಜಗದಗಲ….

-ಸಿದ್ದುಜನ್ನೂರ್, ಚಾಮರಾಜನಗರ

Leave a Reply

Your email address will not be published. Required fields are marked *