Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೧೩೦೮, ಕವಯಿತ್ರಿ: ಮಂಜುಳಾ‌ ಹುಲ್ಲಹಳ್ಳಿ, ಚಿಕ್ಕಮಗಳೂರು, ಕವನದ ಶೀರ್ಷಿಕೆ: ಬದುಕು - Karnataka Kahale

ಅನುದಿನ ಕವನ-೧೩೦೮, ಕವಯಿತ್ರಿ: ಮಂಜುಳಾ‌ ಹುಲ್ಲಹಳ್ಳಿ, ಚಿಕ್ಕಮಗಳೂರು, ಕವನದ ಶೀರ್ಷಿಕೆ: ಬದುಕು

ಬದುಕು…

ನಿಂತ ನೀರಾದರೆ
ಕೆರೆಯಾಗುತ್ತದೆ, ಕೊರೆಯಾಗುತ್ತದೆ,
ಕೊಳೆಯಾಗುತ್ತದೆ, ಕಳೆ ತುಂಬುತ್ತದೆ,
ಕಷ್ಟಗಳ ಬೇಗೆಗೆ ಆವಿಯಾಗಿ
ಕಣ್ಮರೆಯಾಗುತ್ತದೆ.

ಹರಿವ ನೀರಾದರೆ
ಹಸಿರುಣಿಸುತ್ತದೆ, ಆಸರೆಯಾಗುತ್ತದೆ,
ಅರಸಿ ಬಂದವರಿಗೆ ಜೊತೆ ನೀಡಿ
ಪಾವನಗಂಗೆಯಾಗುತ್ತದೆ,
ಇಬ್ಬನಿ ಒಡೆಯಾ
ನಿನ್ನ ಸೇರಿ ಕೃತಾರ್ಥವಾಗುತ್ತದೆ


-ಮಂಜುಳಾ ಹುಲ್ಲಹಳ್ಳಿ, ಚಿಕ್ಕಮಗಳೂರು