ಕಾವ್ಯ ಕಹಳೆ, ಕವಿ: ವಿಕಾಸ್ ಆರ್ ಮೌರ್ಯ, ಬೆಂಗಳೂರು, ಕವನದ ಶೀರ್ಷಿಕೆ: ಗೆಲುವು

ಗೆಲುವು

ಹೂವನ್ನು ಹೊಸಕಿ ಹಾಕಿದೊಡೆ
ಪರಿಮಳ ಪ್ರಾಣ ಬಿಟ್ಟೀತೆ
ಹಿಂಡಿದಷ್ಟೂ ಘಮಲು
ಗಗನಕ್ಕೆ ಮುತ್ತಿಕ್ಕದಿದ್ದೀತೆ

ಪ್ರೀತಿಯ ಕೊಡುಗೆಗೂ
ಮುಡಿಯುಡುಗೆಗೂ
ಕಡೆಗೆ ಕೊನೆಯುಸಿರಿಗೂ
ಮಾತ್ರ ನೆನಪಾದೀತೆ?

ಮೈಕೊಡವಿ ಪ್ರತಿಭಟಿಸಿ
ಮೈಮುಟ್ಟಿದವನೆದುರಿಸಿ
ಕಣ್ಣೀರನಂತರಾಳ ನೀರಾಗಿಸಿ
ಅರಳಿದ ಹೂವ ಕಂಡಿಲ್ಲವೆ?

ಇಂದು ಜಪಾನಿನ ಹೂ
ಸೋತದ್ದು ಕುಸ್ತಿಯಲ್ಲೆ..
ನಮ್ಮನೆಯ ಹೂ ಗೆದ್ದದ್ದು
ಕೇವಲ ಕುಸ್ತಿಯಲ್ಲಲ್ಲ…

-ವಿಕಾಸ್ ಆರ್ ಮೌರ್ಯ, ಬೆಂಗಳೂರು
—–

Leave a Reply

Your email address will not be published. Required fields are marked *