ಅನುದಿನ ಕವನ-೧೩೪೮, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಬಳಪದ ಘಮಲು….

ಬಳಪದ ಘಮಲು….

ನನ್ನ ಕವಿತೆ
ನನ್ನ ಗುರುವಿನ
ಬಳಪದ ಘಮಲು…

ನನ್ನ ಕವಿತೆ
ನನ್ನ ಗುರುವು
ತಿದ್ದಿತೀಡಿದ ಸಮೃದ್ಧ ಫಸಲು…

ನನ್ನ ಕವಿತೆ
ನನ್ನ ಗುರುವಿನ
ಕೈ ಚಳಕದ ಮಹಿಮೆ…

ನನ್ನ ಕವಿತೆ
ನನ್ನ ಗುರುವು
ತೋರಿದ ಬುದ್ಧನೊಲುಮೆ…

ನನ್ನ ಕವಿತೆ
ನನ್ನ ಗುರುವಿನ
ಸತ್ಯಶೋಧನ ಚರಿತೆ…

ನನ್ನ ಕವಿತೆ
ನನ್ನ ಗುರುವು
ಕಲಿಸಿದ ಅಕ್ಷರಗಳ ಹಣತೆ…

ನನ್ನ ಕವಿತೆ
ನನ್ನ ಗುರುವಿನ
ಶ್ರೀಮಂತ ಓದಿನ ನಡೆನುಡಿ ಕಾಣಿಕೆ…

ನನ್ನ ಕವಿತೆ
ನನ್ನ ಗುರುವು
ಓದಿಸಿದ ಪದಗಳ ಮಾಲಿಕೆ…


-ಸಿದ್ದು ಜನ್ನೂರ್, ಚಾಮರಾಜನಗರ
—–

Leave a Reply

Your email address will not be published. Required fields are marked *