ಬಳ್ಳಾರಿ, ಜು.29: ಬೆಂಗಳೂರಿನ ಅಧ್ಯಾಪಕ ರೂಪೇಶ್ ಪುತ್ತೂರು ಅವರ ಸಾಮರಸ್ಯ- ಬಾಂಧವ್ಯ ಪಾದಯಾತ್ರೆ ಭಾನುವಾರ ಬೆಳಿಗ್ಗೆ ನಗರವನ್ನು ತಲುಪಿತು.
ಸೌಹಾರ್ದ ಬಾಂಧವ್ಯದ ಬೀದರ್ ಬೆಂಗಳೂರು ವರೆಗೆ ಏಕವ್ಯಕ್ತಿ ಪಾದಯಾತ್ರೆ ಮಾಡುತ್ತಿರುವ ರೂಪೇಶ್ ಪುತ್ತೂರು ಅವರನ್ನು ನಗರದ ಹೊರವಲಯದಲ್ಲಿ ಕೆಜೆವಿಎಸ್ ರಾಜ್ಯ ಉಪಾದ್ಯಕ್ಷರೂ ಆದ ಹಿರಿಯ ಸಾಹಿತಿ ವೆಂಕಟಯ್ಯ ಅಪ್ಪಗೆರೆ ಸ್ವಾಗತಿಸಿದರು.

ಬಳಿಕ ನಗರದ ಎಸ್ ಜಿ ಟಿ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತರ ಸಂಘಟನೆ( KGBREWA) ಯ ಪ್ರಧಾನ ಕಾರ್ಯದರ್ಶಿ ಗಂಗಣ್ಣ ಪತ್ತಾರ, ವಿಚಾರವಾದಿ ಸಂಘಟನೆಯ ಕೆ.ಎಂ.ಗುರುಸಿದ್ಧ ಮೂರ್ತಿ, ಹೋರಾಟಗಾರ ಜೆ.ಸತ್ಯಬಾಬು ಅವರು ಸಂವಾದ ಕಾರ್ಯಕ್ರಮಕ್ಕೆ ಸಭಾಂಗಣಕ್ಕೆ ಬರಮಾಡಿಕೊಂಡರು.
ಸಂವಾದದ ನಂತರ ರೂಪೇಶ್ ಪುತ್ತೂರು ಅವರನ್ನು ಮಧ್ಯಾಹ್ನ 1.30ಕ್ಕೆ ಬಳ್ಳಾರಿ ಗಡಿಯಿಂದ ಬೀಳ್ಕೊಡಲಾಯಿತು. ಮುಂದೆ ಅವರು ಚಿತ್ರದುರ್ಗ ಜಿಲ್ಲೆಯ ರಾಂಪುರಕ್ಕೆ ಅವರ ಪಾದಯಾತ್ರೆ ಮುಂದುವರೆಯಿತು.
