ಅನುದಿನ‌ ಕವನ-೧೪೦೭, ಕವಯಿತ್ರಿ: ರಜನಿ ಅಶೋಕ ಜೀರಗ್ಯಾಳ, ಗೋಕಾಕ

ಗುಡಿ ಕಟ್ಟಿ ಪೂಜೆಯಮಾಡಿ
ಏನು ಸಾಧಿಸಿದೆ ಅಣ್ಣ
ಹಸಿದ ಹೊಟ್ಟೆ ಅಳುತಲಿದೆ ಒಂದು ಚೂರು ಕೂಳು ಹಾಕಿ ಪುಣ್ಯ ಕಟ್ಟಿ ಕೊಳ್ಳಣ್ಣ
ಅತಿವೃಷ್ಟಿ ಅನಾವೃಷ್ಟಿ ಕಾಡುತಿದೆ ಪರಿಹಾರ ಹುಡುಕಣ್ಣ
ಕೆಲಸವಿಲ್ಲದೆ ಬೀದಿಗೆ ಬಿದ್ದವರಿಗೆ ಕೆಲಸ ಕೊಡಿಸಬೇಕಣ್ಣ
ರಸ್ತೆಯೆಲ್ಲ ಹಳ್ಳಕೊಳ್ಳಗಳಾಗಿವೆ
ದುರಸ್ತಿ ಮಾಡಿಸಣ್ಣ
ಪಕ್ಷಾಂತರಿಗಳಿಗೆ ಗಾಳಹಾಕದೆ
ದೇಶದ ಅಭಿವೃದ್ಧಿ ಗೆ ಕೈ ಹಾಕಣ್ಣ
ಕುಟುಂಬ ರಾಜಕಾರಣಕ್ಕೆ ಕೈ ಹಾಕದೆ
ದೇಶದ ಬಗ್ಗೆ ಚಿಂತಿಸುವಗೆ ಟೀಕೆಟು ನೀಡಣ್ಣ
ಧರ್ಮಜಾತಿಯತೆಯ ಗೋಜಿಗೆ ನೀ
ತಲೆಯ ಬಾಗಿಸಬೇಡಣ್ಣ
ನೀತಿ ಸತ್ಯದ ಮಾರ್ಗದಲಿ ನನ್ನ
ದೇಶದ ಏಳ್ಗೆಗೆಗೆ ದುಡಿಯಣ್ಣ

-ರಜನಿ ಅಶೋಕ ಜೀರಗ್ಯಾಳ, ಗೋಕಾಕ

Leave a Reply

Your email address will not be published. Required fields are marked *