ಅನುದಿನ ಕವನ-೧೯೪೭, ಹಿರಿಯ ಕವಿ: ಗುಲ್ಜಾರ್, ಕನ್ನಡಕ್ಕೆ: ಸಿದ್ದರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಪ್ರತಿ ಸಲವೂ ಹೇಳುತ್ತಾಳೆ ಆ ಗಗನಸಖಿ

ಪ್ರತಿ ಸಲವೂ ಹೇಳುತ್ತಾಳೆ ಆ ಗಗನಸಖಿ

ಪ್ರತಿ ಸಲವೂ ಹೇಳುತ್ತಾಳೆ ಆ ಗಗನಸಖಿ ಆಕಸ್ಮಾತ್ ಆಗಿ ವಿಮಾನನೀರಿನಲ್ಲಿ ಇಳಿಯಬೇಕಾಯಿತೆಂದರೆ ಸೀಟಿನ ಅಡಿಯಲ್ಲಿ ಜಾಕೆಟ್ ಇದೆ ಎರಡೂ ನಳಿಕೆಗಳನ್ನು ಬಾಯಲ್ಲಿರಿಸಿಕೊಂಡು ಮತ್ತು ಬಾಯಿಂದ ಊದುತ್ತ…….. ವಿಮಾನದಲ್ಲಿ ಒಂದು ವೇಳೆ ಆಕ್ಸಿಜನ್ ಕಡಿಮೆಯಾದರೆ ಮಾಸ್ಕ್ ಇದೆ, ತನ್ನಷ್ಟಕ್ಕೆ ತಾನೆ ಕಳಚಿ ಬೀಳುತ್ತದೆ

ಮೂಗಿನ ಮೇಲಿರಿಸಿಕೊಂಡು……….. ಬೆಂಕಿ ಬಿದ್ದರೆ ನಾಲ್ಕು ಬಾಗಿಲಿವೆ,  ನಡುವೆ ಎರಡಿವೆಹಿಂದೆ ಮತ್ತೆರಡಿವೆ….

ಪ್ರತಿ ಸಲವೂ ಅದೇ ಹೆದರಿಕೆ ಒಂದು ವೇಳೆ ಆ ರೀತಿಯಾದರೆ ಎಷ್ಟೊಂದು ಕಷ್ಟವಾಗುವುದು ಸಾಯುವುದು

-ಗುಲ್ಜಾರ್

ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ

—–

Leave a Reply

Your email address will not be published. Required fields are marked *