ಖಾಲಿ ಅಂದ್ರೆ ಖಾಲಿ ಕುಂತಾಗ
ಇಷ್ಟೇ ಮಾಡಲು ಬಯಸುತ್ತೇನೆ
ಪುಟಗಳ ತಿರುವಿ ಹಾಕುತ್ತೇನೆ
ಅಕ್ಷರಗಳ ಮದ್ಯ ಕಳೆದುಹೋಗುತ್ತೇನೆ
ಜೊಂಪು ನಿದ್ದೆ ಹೊಡೆಯುತ್ತೇನೆ
ಓದಿದ ಪಾತ್ರವಾಗಿ ಜೀವಿಸುತ್ತೇನೆ
ಕನಸು ಕಾಣುವುದು ಎಂದರೆ
ನಿದ್ದೆಯಲ್ಲೂ ಜೀವಂತವಾಗಿರುವುದು
ಜೀವಂತವಿರುವುದು ಅಂದರೆ
ಇಷ್ಟೇ…..
ಹೇಗೆ ಬೇಕೋ ಹಾಗೆ ಬದುಕುವುದು

– ವಿಶಾಲ್ ಮ್ಯಾಸರ್, ಹೊಸಪೇಟೆ
