Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಧಾರವಾಡ: ಡಾ. ಅನಸೂಯ ಕಾಂಬಳೆ ಅವರನ್ನು ಗೌರವಿಸಿದ ಬುರ್ರಕಥಾ, ಜನಪದ ಕಲಾ ಟ್ರಸ್ಟ್ - Karnataka Kahale

ಧಾರವಾಡ: ಡಾ. ಅನಸೂಯ ಕಾಂಬಳೆ ಅವರನ್ನು ಗೌರವಿಸಿದ ಬುರ್ರಕಥಾ, ಜನಪದ ಕಲಾ ಟ್ರಸ್ಟ್

ಧಾರವಾಡ: ಸಾಹಿತಿ, ಚಿಂತಕಿ, ವಿದ್ಯಾರ್ಥಿ ಸ್ನೇಹಿ ಪ್ರಾಧ್ಯಾಪಕಿ ಡಾ. ಅನಸೂಯ ಕಾಂಬಳೆ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ ಸಾಹಿತ್ಯಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಅವರ ನಿವಾಸಕ್ಕೆ ತೆರಳಿ ಬುರ್ರಕಥಾ, ಜನಪದ ಕಲಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂವಾದ ರೂಪದಲ್ಲಿ ಸುದೀರ್ಘವಾಗಿ ಮಾತನಾಡಿದ ಡಾ. ಅನಸೂಯ ಕಾಂಬಳೆ ಅವರು, ಸ್ವತಂತ್ರವಾಗಿ ಬರೆಯಲು, ಆಲೋಚಿಸಲು, ಮತ್ತೊಬ್ಬರಿಗಿಂತ ವಿಭಿನ್ನವಾಗಿ ಇರಲು ನಮ್ಮ ಯುವಕರು ರೂಢಿಸಿಕೊಳ್ಳಬೇಕಾಗಿದೆ. ಇಂದಿನ ಯುವಜನತೆ ಹೀರೋಗಳನ್ನು ಹೆಚ್ಚಾಗಿ ಗಡ್ಡಗಳಿಗಾಗಿ ಅನುಸರಿಸುತ್ತಿದ್ದಾರೆ. ಆದರೆ ಆ ಹೀರೋಗಳು ದಿನಾಲೂ ಪಾರ್ಲರ್ ಹೋಗಿ ಕ್ಲೀನ್ ಶೇವ್ ಆಗಿ ಇರುತ್ತಾರೆ. ಆದರೆ ನಮ್ಮ ವಿದ್ಯಾರ್ಥಿಗಳು ಹಾಸಿಗೆಯಲ್ಲಿ ಈಗ ಎದ್ದು ಬಂದಂತೆ ಆಕಡೆ-ಈಕಡೆ ಕೂದಲು ಎದುರು-ಬದುರು ಹರಡಿರುತ್ತವೆ. ಶಿಸ್ತು ಅನ್ನುವುದೇ ಇಲ್ಲ ಎಂದು ಬೇಸರ‌ ವ್ಯಕ್ತಪಡಿಸಿದರು.
ಎರಡು ಜೊತೆ ಬಟ್ಟೆಯಿದ್ದರೂ ಪರವಾಗಿಲ್ಲ ಶುಚಿಯಾಗಿ ಇರಬೇಕಾದದ್ದು, ಕೈಯಲ್ಲಿ ಒಂದು ಪುಸ್ತಕ ಹಿಡಿಯುವುದು(ತದನಂತರ ಅದೇ ಓದಿಸುತ್ತದೆ) ಮೊದಲು ನಿತ್ಯಕರ್ಮವಾಗಬೇಕೆಂದು ಸಲಹೆ ನೀಡಿದರು.
ಪ್ರಸ್ತುತ ಯುವಕರಿಗೆ ತಮ್ಮ ಆಲಸ್ಯವೇ ತಮಗೆ ಶತ್ರು ಆಗಿಬಿಟ್ಟಿದೆ. ಇದರ ಅರಿವೇ ಅವರಿಗಿಲ್ಲ. ಹಾಸಿಗೆ ಬಿಟ್ಟು ಬೆಳಿಗ್ಗೆ ಬೇಗ ಏಳುವುದೇ ಇಲ್ಲ. ಪುಸ್ತಕ ಓದುವ ಅಭ್ಯಾಸವಿಲ್ಲ. ಚರ್ಚೆಗಳಿಗೆ ಮುಕ್ತವಾಗಿ ಒಳಗೊಳ್ಳುತ್ತಿಲ್ಲ. ಭಿನ್ನಾಭಿಪ್ರಾಯ ಇದ್ದಾಗಲೂ ಪರಸ್ಪರ ಗೌರವವನ್ನಿಟ್ಟುಕೊಂಡು ಸಂವಾದ ನಡೆಸಬೇಕೆಂಬ ಪರಿಕಲ್ಪನೆ ಇಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಶಿವರಾಜ್ ಮೋತಿ, ಹೋರಾಟಗಾರ ಮಂಜುನಾಥ್ ಛಲವಾದಿ, ಯುವಕವಿ ಹನುಮಂತ ದಾಸರ್, ವಕೀಲ ರಾಜಪ್ಪ, ಸಂಶೋಧನಾರ್ಥಿ ನಾರಾಯಣ ನಾಗೋಲಿ ಇದ್ದರು.
—–