ಹೊಸಪೇಟೆ ಎಸ್ ಬಿ ಬಿ ಎನ್  ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿ ನಾಗರಾಜ್ ಗಂಟಿ ಭಾಷಣ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಹೊಸಪೇಟೆ, ಡಿ.31:  ಕರ್ನಾಟಕ ಗಮಕ ಕಲಾ ಪರಿಷತ್, ಶ್ರೀ ವಾಗ್ದೇವಿ ಗಮಕಲ ಪ್ರತಿಷ್ಠಾನ ಜಿಲ್ಲಾ ಘಟಕ ವಿಜಯನಗರ ವತಿಯಿಂದ ಕವಿ ಕಾವ್ಯ ಪರಿಚಯ ಭಾಷಣ ಸ್ಪರ್ಧೆಯಲ್ಲಿ ನಗರದ ಎಸ್‌ ಬಿ ಬಿ ಎನ್, ಶಿಕ್ಷಣ ಮಹಾವಿದ್ಯಾಲಯದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ನಾಗರಾಜ್ ಗಂಟಿ ಜಿಲ್ಲಾ ಮಟ್ಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಹಾವಿದ್ಯಾಲಯದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ಮಂಜುಳಾ ಏನ್, ದ್ವಿತೀಯ ಸ್ಥಾನ, ಶಿವಕುಮಾರ್  ಸಿ, ಮತ್ತು ಪ್ರಶಾಂತ್ ಕುಮಾರ್ ಸಮಾಧಾನಕರ ಬಹುಮಾನಗಳಿಸಿದ್ದಾರೆ.

ಪ್ರಥಮ ಸ್ಥಾನ ಗಳಿಸಿರುವ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ನಾಗರಾಜ ಗಂಟಿ ಜ. 12 ಬೆಂಗಳೂರಿನಲ್ಲಿ ನಡೆಯುವ ಕುಮಾರವ್ಯಾಸ ಜಯಂತಿಯ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ಭಾಗವಹಿಸುತ್ತಾರೆ ಎಂದು ವಿಜಯನಗರ ಜಿಲ್ಲಾ ಗಮಕ ಕಲಾ ಪ್ರತಿಷ್ಠಾನದ ಜಿಲ್ಲಾಧ್ಯಕ್ಷರಾದ ಪಲ್ಲವಿ ಆರ್ ಭಟ್ ರವರು ತಿಳಿಸಿದ್ದಾರೆ.      ಅಭಿನಂದನೆ:  ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿಶ್ವನಾಥ ಗೌಡ,  ಆಡಳಿತ ಮಂಡಳಿಯ ಅಧ್ಯಕ್ಷರಾದ, ಬಾದಾಮಿ ಕರಿಬಸವರಾಜ್,  ಅಧ್ಯಾಪಕರಾದ ಡಾ. ಜಗದೀಶ್, ಡಾ. ಸತೀಶ್ ಸೂರಿಮಠ್, ಡಾ ಶಿವನಗೌಡ ಸಾತ್ಮರ್, ಡಾ. ಪಾರ್ವತಿ ಕೆಎಂ. ಡಾ. ಮಲ್ಲಿಕಾ, ಡಾ. ಶೋಭಾ ಪಾಟೀಲ್, ಇಟ್ಟಗಿ ಮಲ್ಲಿಕಾರ್ಜುನ, ಬಿದರಿಕುಂದಿ ಮಲ್ಲಿಕಾರ್ಜುನ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ ಹಾಗೂ ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ನಾಗರಾಜ ಗಂಟಿ ವಿಜೇತನಾಗಲಿ ಎಂದು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *