ಅನುದಿನ ಕವನ-೧೬೦೦, ಕವಯಿತ್ರಿ: ರಾಧಾ ಶಂಕರ್ ವಾಲ್ಮೀಕಿ ತಿಪಟೂರು, ಕವನದ ಶೀರ್ಷಿಕೆ: ಯಾರೇ ನೀನು ಚೆಲುವೆ

ಯಾರೇ ನೀನು ಚಲುವೆ

ಯಾರೇ ನೀನು ಚೆಲುವೆ
ಒಬ್ಬಳೇ ಯಾಕೆ ನಿಂತಿರುವೆ
ಮಂಜು ಮುಸುಕಿನ ನಡುವೆ
ಯಾರಿಗಾಗಿ ಕಾದು ಕುಳಿತಿರುವೆ

ಚಿಗುರು ಮೀಸೆಯ ಗೆಳೆಯ
ಬಿಡುವೆಯ ಸ್ವಲ್ಪ ದಾರಿಯ
ನಿನಗ್ಯಾಕೆ ಹೇಳಬೇಕು ವಾರ್ತೆಯ
ಬಂದ ಹಾದಿಯಲ್ಲೇ ಹೊರಡುವೆಯ

ದಿಟ್ಟಿಸಿ ನೋಡಬೇಡವೋ ಮಾವ
ಬೆದರುವುದು ಈ ನನ್ನ ಜೀವ
ಸಾಕು ನಿಲ್ಲಿಸು ನಿನ್ನ ಪ್ರತಾಪವ
ತೋರಿಸಬಾರದೆ ತುಸು ಪ್ರೇಮವ

-ರಾಧಾ ಶಂಕರ್ ವಾಲ್ಮೀಕಿ
ತಿಪಟೂರು