ಬಳ್ಳಾರಿ ಕಪ್ಪಗಲ್ಲು ರಸ್ತೆಗೆ ಮಾಜಿ ಸಚಿವ ದಿ.ಮುಂಡ್ಲೂರು ರಾಮಪ್ಪ ಅವರ ಹೆಸರಿಡಲು ತೀರ್ಮಾನ: ಶಾಸಕ ನಾರಾ ಭರತ್ ರೆಡ್ಡಿ

ಮಾಜಿ ಸಚಿವ ದಿ.‌ಮುಂಡ್ಲೂರು ರಾಮಪ್ಪ

ಬಳ್ಳಾರಿ, ಮೇ.19: ನಗರದ ಕಪ್ಪಗಲ್ಲು ರಸ್ತೆಗೆ ಮಾಜಿ ಸಚಿವ ದಿ.ಮುಂಡ್ಲೂರು ರಾಮಪ್ಪ ಅವರ ಹೆಸರಿಡಲು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.

ಸೋಮವಾರ ನಗರದ ಕೋಟೆ ಪ್ರದೇಶದಲ್ಲಿರುವ ಜಿ.ಪಂ.ನ ನಜೀರಸಾಬ ಸಭಾಂಗಣದಲ್ಲಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯಿತು.
ನಗರದ ಕಪ್ಪಗಲ್ಲು ರಸ್ತೆಗೆ ಮಾಜಿ ಸಚಿವ ದಿ.ಮುಂಡ್ಲೂರು ರಾಮಪ್ಪ ಅವರ ಹೆಸರಿಡುವಂತೆ ಕೋರಿ ಶಾಸಕ ನಾರಾ ಭರತ್ ರೆಡ್ಡಿ ಮನವಿ ಸಲ್ಲಿಸಿದ್ದೆನು, ಸೋಮವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿ, ತೀರ್ಮಾನಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
1930ರಲ್ಲಿ ಮುಂಡ್ಲೂರು ಅಂಜಿನಪ್ಪ ಮತ್ತು ಮುಂಡ್ಲೂರು ವೆಂಕಟಮ್ಮ ದಂಪತಿಗಳ ಪುತ್ರರಾಗಿ ಜನಿಸಿದ್ದ ಮುಂಡ್ಲೂರು ರಾಮಪ್ಪ ಅವರು ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಇಂಧನ ಸಚಿವರಾಗಿ ಸೇವೆ ಸಲ್ಲಿಸಿದ್ದರು.


ಸೋಮವಾರ ನಡೆದ ಸಾಮಾನ್ಯ ಸಭೆಯ ವೇಳೆ ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್, ಮಾಜಿ ಸಚಿವ-ಶಾಸಕ ಬಿ.ನಾಗೇಂದ್ರ, ಮೇಯರ್ ಮುಲ್ಲಂಗಿ ನಂದೀಶ್, ಉಪಮೇಯರ್ ಡಿ.ಸುಕುಂ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಪಾಲಿಕೆ ಆಯುಕ್ತ ಖಲೀಲಸಾಬ ಹಾಗೂ ಅಧಿಕಾರಿ – ಸಿಬ್ಬಂದಿ ವರ್ಗ ಇದ್ದರು.