ಅನುದಿನ‌ ಕವನ-೧೬೧೯, ಹಿರಿಯ ಕವಿ:ಪ್ರಕಾಶ್ ಮಲ್ಕಿಒಡೆಯರ್, ಹೂವಿನ‌ಹಡಗಲಿ, ಕವನದ ಶೀರ್ಷಿಕೆ: ಸಂತಸದ ಹಾಡು

ಸಂತಸದ ಹಾಡು

ರಸ್ತೆಯ ಇತ್ತರಗಳಲ್ಲೂ
ಎತ್ತರೆತ್ತರ ಬೆಳೆಯುತ್ತಿರುವ
ಗಿಡಮರಗಳ ಕಂಡು
ಮೈ ಮನ ಪುಳಕಗೊಂಡಿದೆ ನೋಡು
ತನಗೆತಾನೇ ಹರಿದು ಬರುತ್ತಿದೆ
ಸಂತಸದ ಹಾಡು

ಬಿಸಿಲಿಗೆ ನಿಂತರೂ
ಬಸವಳಿದು ಬಂದವರಿಗೆ
ತಂಪು ನೀಡುವ ಉದಾರತೆ
ನಾವೂ ಸಹೃದಯತೆಯಿಂದ ಕಾಪಾಡಿದರೆ ಗಿಡ ಮರಗಳನ್ನು
ಬಿಸಿಲಿನಿಂದ ರಕ್ಷಿಸಬಲ್ಲವು ಒಂದರಘಳಿಗೆ ನಮ್ಮಜೀವವನ್ನು
“ಸಹಜೀವನ ಅದೆಷ್ಟು ಚಂದ””
ಸಂದೇಶ ಹೊಮ್ಮುತ್ತದೆ ಗಿಡಮರಗಳಿಂದ

ಅಭಿವೃದ್ಧಿ ಯ ಹೆಸರಿನಿಂದ ಗಿಡಮರ ನಾಶಮಾಡಿದರೆ ನಾವು
ನಮಗೆನಾವೇ ತಂದುಕೊಳ್ಳತ್ತೇವೆ ನೋವು
ಗಿಡಮರಬಳ್ಳಿಗಳಿಂದಲೇ
ಚೈತ್ರಾಗಮನದ ಸುಳಿವು
ನಾಡು ಬೆಳೆಸುವ ಭರದಲ್ಲಿ
ಕಾಡು ಮರತರೆ ನಾವು
ಜೀವನ ಪರ್ಯಂತ ಅನುಭವಿಸಬೇಕಾದೀತು ನೋವು


-ಪ್ರಕಾಶ್ ಮಲ್ಕಿಒಡೆಯರ್
ಹೂವಿನ ಹಡಗಲಿ
—–

Leave a Reply

Your email address will not be published. Required fields are marked *