ಅನುದಿನ ಕವನ-೧೬೨೦, ಕವಿ: ಸಿದ್ದು ಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ: ಸೋಜುಗದ ಹೂವು…

ಸೋಜುಗದ ಹೂವು…

ಇಲ್ಲೆನೋ ಸೊಗಸಿದೆ
ಪ್ರತಿ ಬಾರಿ ಅವಳು ನಕ್ಕಾಗಲು
ಹಾಗೆ ಅನಿಸುತ್ತದೆ…

ಒಂದು ನಿರ್ಲಿಪ್ತ ನಗು ಅದು
ಸೂರ್ಯ,ಚಂದ್ರ,ತಾರೆ ಎಲ್ಲರು ಬೆಳಕರಿಸಿ
ಥಂಡಿ ಥಂಡಿ ಕತ್ತಲ ಸರಿಸಿದ ಹಾಗೆ…

ಮಬ್ಬುಗತ್ತಲ ಸರಿಸಿ ಬೀದಿಗೆ ಬೀಳುವ
ಕಿರಣಕ್ಕೂ ಮೊದಲೇ ಮೂಡುವ
ಅವಳ ಕೈ ಬೆರಳ ರಂಗಿನ ರಂಗೋಲಿಯ ಹಾಗೆ
ರಂಗೇರಿದ ಭೂಮಿಗೆ ಅವಳಷ್ಟೆ ಸಂಭ್ರಮದ ಹೊನಲು…

ಹಸಿರು ಜರತಾರಿಯೋ
ಕೆಂಪು ಬಳೆ ನಾರಿಯೋ
ಅವಳು ತೊಟ್ಟ ಕನಸಿಗೆ
ಸದಾ ಪರಿಮಳನೀಯುತ್ತಲೇ ಇರುವ
ಸೋಜುಗದ ಹೂವಂತೆ
ಅವಳ ಸವಿ ನಗುವೊಂದು
ಮುನಿಸಿನಷ್ಟೆ ಸೋಜುಗದ ಹೂವಂತೆ…


-ಸಿದ್ದು ಜನ್ನೂರ್, ಚಾಮರಾಜ ನಗರ
—–

Leave a Reply

Your email address will not be published. Required fields are marked *