ಅವನೇನೋ ಮುಡಿಸಿ ಹೋದ,
ಮುಡಿಗಿಷ್ಟು ಮಲ್ಲಿಗೆ…
ನೋಡಿಲ್ಲಿ ಒಂದೇ ಸಮನೆ
ಅರಳುತ್ತಿವೆ ನೆನಪುಗಳು ಮೆಲ್ಲಗೆ
ಮತ್ತೆ ಎಂದು ಬರುವನು ಇಲ್ಲಿಗೆ ?!
ದೇಶ ಕಾಯಲು ಹೋದವನಿಗೆ,
ಆಗೊಮ್ಮೆ, ಈಗೊಮ್ಮೆ ಬರಬಹುದು
ಎನ್ನ ನೆನಪು !
ನನಗಿಲ್ಲಿ ಅನುಗಾಲ ಅವನದೇ ಕಂಪು
ಇಂದು ಬಂದಾನೋ, ನಾಳೆ ಬಂದಾನೋ ?!
ಅದೆಷ್ಟು ಕಂಪನ…
ಅನುದಿನ, ಅನುಕ್ಷಣ…
ಅವನದೇ ಧ್ಯಾನ…..!

-ವೀಣಾ ಶ್ರೀನಿವಾಸ್, ಮಧುಗಿರಿ
