ಬಳ್ಳಾರಿ, ಜೂ.18: ಕೇಂದ್ರಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರಕ್ಕೆ ತಾಲೂಕಿನ ಹಂದಿಹಾಳು ಗ್ರಾಮದ ಡಾ. ಕೆ. ಶಿವಲಿಂಗಪ್ಪ ಅವರು ಭಾಜನರಾಗಿದ್ದಾರೆ.
ಶಿವಲಿಂಗಪ್ಪ ಅವರು ರಚಿಸಿರುವ ನೋಟ್ ಬುಕ್ ಕೃತಿಗೆ 2025ನೇ ಸಾಲಿನ ಬಾಲ ಸಾಹಿತ್ಯ ಪುರಸ್ಕಾರ ಲಭಿಸಿದೆ. ವೃತ್ತಿಯಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಶಿವಲಿಂಗಪ್ಪ ಅವರ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿಯ ಬಾಲ ಪುರಸ್ಕಾರ ಲಭಿಸಿರುವುದಕ್ಕೆ ಜಿಲ್ಲೆಯ ಸಾಂಸ್ಕೃತಿಕ ಲೋಕ ಸಂಭ್ರಮಿಸುತ್ತಿದೆ.