🧏♂️❤️ ನನ್ನವಳು ಪುಟ್ಮಲ್ಲಿ ❤️🧏♂️
ಕಾವ್ಯದ ಕನ್ನಿಕೆಯವಳು
ಕಲ್ಪನೆಯ ಬೆಡಗಿಯವಳು
ಭಾವನೆಗಳ ಅಭಿವ್ಯಕ್ತಿಯವಳು
ಹೃನ್ಮನಗಳ ಆವರಿಸಿದಂತವಳು
ನನ್ನವಳು ಪುಟ್ಮಲ್ಲಿ🧏♂️❤️
ಹೃದಯವದನು ಗೆದ್ದವಳು
ಮನಸಿನಲಿ ನೆಲೆ ನಿಂತವಳು
ಮಾತಿನಲೆಂದು ಸೋಲದವಳು
ಮೌನಕದೂ ಭಾಷ್ಯ ಬರೆದವಳು
ನನ್ನವಳು ಪುಟ್ಮಲ್ಲಿ🧏♂️❤️
ನೋವು ನಲಿವಿಗೆ ಸ್ಪಂದಿಸುವವಳು
ಕಷ್ಟ ಕಾರ್ಪಣ್ಯಕೂ ಮಿಡಿಯುವವಳು
ಸಂದಿಗ್ಧ ಸ್ಥಿತಿಯಲು ಕೈಬಿಡದಂತವಳು
ಉಸಿರಿಗದು ಪ್ರತಿ ಉಸಿರಾದಂತವಳು
ನನ್ನವಳು ಪುಟ್ಮಲ್ಲಿ🧏♂️❤️
ಬಾನಿನೊಳು ಮಿನುಗು ತಾರೆಯವಳು
ಹಾಲಿನಂದದಿ ಹೊಳೆವ ಚಂದಿರನವಳು
ಪ್ರಕೃತಿಯ ಚೆಲುವಿಕೆಗೆ ಸರಿಸಾಟಿಯವಳು
ನಿತ್ಯ ನಿರಂತರವೆನಗೆ ಸ್ಫೂರ್ತಿಯಾಗಿಹಳು
ನನ್ನವಳು ಪುಟ್ಮಲ್ಲಿ🧏♂️❤️
-✍️ ಗೀತೇಶ್ (ವಿ.ಆರ್. ಮುರಲೀಧರ್), ಬೆಂಗಳೂರು