ಧಾರವಾಡ, ಜು.15: ಹಿರಿಯ ಸಾಹಿತಿ, ಪತ್ರಕರ್ತ ರಂಜಾನ್ ದರ್ಗಾ ಅವರಿಗೆ ರಾಜ್ಯಮಟ್ಟದ ಶರಣ ಮರುಳ ಶಂಕರ ದೇವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೀದರ್ ಜಿಲ್ಲೆಯ ಭಾಲ್ಕಿಯ ಶಬನಮ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ನೋಂ) ಅಧ್ಯಕ್ಷೆ ಡಾ. ಮಕ್ತುಂಬಿ ಎಂ. ಅವರು ನಗರದ ರಂಜಾನ್ ದರ್ಗ ಅವರ ನಿವಾಸದಲ್ಲಿ 12ನೇ ಶತಮಾನದ ಶರಣ ಮರುಳಶಂಕರದೇವ ಅವರ ಹೆಸರಿನ ಪ್ರಶಸ್ತಿ ನೀಡಿ ಗೌರವಿಸಿದರು.
ಧಾರವಾಡ ಬಸವ ಕೇಂದ್ರದ ಅಧ್ಯಕ್ಷ ಸಿದ್ಧರಾಮ ನಡಕಟ್ಟಿ, ಕವಿ ಎ.ಎ. ದರ್ಗಾ, ಪರ್ವೀನ್ ಎ. ದರ್ಗಾ, ಮುಹಿನ್, ಡಾ. ರೇಣುಕಾ, ಶಬನಮ್, ಫರೀದಾಬಾನು ಸೈಫುದ್ದೀನ್, ಸಾಗರ್, ಅರುಣ್ ಮೂಡಿ, ನಸೀಮ್ ಕಿಲ್ಲೇದಾರ್, ತಾಹೇರಾ ರಂಜಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
—–