ಬಳ್ಳಾರಿ: ಜು 22 ರಂದು ಲೇಖಕ ಸಿದ್ಧರಾಮ ಕಲ್ಮಠ ಅವರ ಕರ್ಪೂರದ ಬೆಳಗು ನಾಟಕ ಕೃತಿ ಬಿಡುಗಡೆ

ಬಳ್ಳಾರಿ ಜು. 18: ಲೇಖಕ ಸಿದ್ದರಾಮ ಕಲ್ಮಠ ರಚಿಸಿದ ಕರ್ಪೂರದ ಬೆಳಗು ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮವು ಜು. 22 ರಂದು ಸಂಜೆ 5:30ಕ್ಕೆ ನಗರದ ಹೊಸ ಬಸ್ ನಿಲ್ದಾಣ ಎದುರಿಗೆ ಇರುವ  ಹೀರದ ಸೂಗಮ್ಮ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಸಾನಿಧ್ಯವನ್ನು ಮ.ನಿ.ಪ್ರ.ಶ್ರೀ ಕಲ್ಯಾಣ ಮಹಾಸ್ವಾಮಿಗಳು ವಹಿಸಲಿದ್ದು ವಿಧಾನ ಪರಿಷತ್ ಸದಸ್ಯರಾದ ವೈ ಎಂ ಸತೀಶ್ ಕಾರ್ಯಕ್ರಮ ಉದ್ಘಾಟಿಸುವರು.

ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಣೇಕಲ್ ಮಹಾಂತೇಶ್ ಅಧ್ಯಕ್ಷತೆ ವಹಿಸಲಿದ್ದಾರೆ . ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ನಾಟಕ ಕೃತಿ ಬಿಡುಗಡೆ ಮಾಡುವರು. ಡಾ. ಪಿ. ದಿವಾಕರ ನಾರಾಯಣ ಕೃತಿ ಕುರಿತು ಮಾತಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮರಿಸ್ವಾಮಿ ಮಠದ ಶ್ರೀ ವಾಗೀಶ ಶರ್ಮ ಹೀರದ ಸೂಗಮ್ಮ ಶಾಲೆಯ ಅಧ್ಯಕ್ಷ ಮೇಟಿ ಪಂಪನಗೌಡ, ಕುಡಿತಿನಿ ಸತ್ಸಂಗ ಆಶ್ರಮದ ಪಲ್ಲೇದ ಪಂಪಾಪತೆಪ್ಪ,ರಂಗ ತೋರಣ ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ ಮತ್ತು ನಿವೃತ್ತ ಅಭಿಯಂತರ ಕೇಣಿ ಬಸಪ್ಪ, ಶರಣ ಸಕ್ಕರೆ ಕರಡೀಶ ಸೌಹಾರ್ದ ಪ.ಸೌ. ಸಹಕಾರ ಸಂಘದ ಅಧ್ಯಕ್ಷ ಕಲ್ಗುಡಿ ಮಂಜುನಾಥ, ಸಮಾಜಸೇವಕ ಜಿ. ಮಹಾಲಿಂಗಯ್ಯ ಮತ್ತು ವೀರಶೈವ ತರುಣ ಸಂಘದ ಅಧ್ಯಕ್ಷ ನಂದೀಶ್ ಮಠಂ,
ಭಾಗವಹಿಸಲಿದ್ದಾರೆ. ಜಾನಪದ ಗಾರುಡಿಗ ಯಲ್ಲನಗೌಡ ಶಂಕರ ಬಂಡೆ ಮತ್ತು ಜಡೇಶ್ ಎಮ್ಮಿಗನೂರು ಇವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಲೇಖಕ ಸಿದ್ದರಾಮ ಕಲ್ಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.