ರೈತರ ಮೊಗವು ಅರಳಲಿ
ಬಿಡದೆ ಮೋಡಗಳೆ
ಓಡುತ್ತಿಹಿರಿ ಎಲ್ಲಿ
ಬರಿದಾಗಿವೆ ಹೊಳೆ
ಓಡದೆ ನೀವು ನಿಲ್ಲಿ
ಬಿತ್ತಿದ ಬೆಳೆಗಳು
ನಂಬಿವೆ ಭವದಲ್ಲಿ
ತುಂತುರು ಹನಿಗಳು
ಹೋಗಬಾರದೆ ಚೆಲ್ಲಿ
ಕರಗಿ ಮೋಡಗಳು
ಮಳೆಯು ಸುರಿಯಲಿ
ಬತ್ತಿದ ಬಾವಿಗಳು
ತುಂಬಿ ತಾ ಹರಿಯಲಿ
ನಿತ್ಯ ಹಗಲಿರಳು
ಹಣಿದು ದಣಿಯಲಿ
ಕುಸಿದ ಬೆಳೆಗಳು
ಹಸಿವು ತಣಿಯಲಿ
ನಮ್ಮ ರೈತರ ಗೋಳು
ಕೇಳರು ಜಗದಲಿ
ನೀನೇ ಸಾಂತ್ವಾನ ಹೇಳು
ಸುರಿದು ಬಿಡದಲಿ
ಕಸಿದ ಆ ರೈತರ
ಖುಷಿಯು ಮರಳಲಿ
ನಮ್ಮ ಅನ್ನದಾತರ
ಮೊಗವು ಅರಳಲಿ
-ಸಿದ್ಧರಾಮ ಸಿ ಸರಸಂಬಿ, ಕಲಬುರ್ಗಿ