ಅನುದಿನ ಕವನ-೧೬೭೨, ಯುವ ಕವಿ: ತರುಣ್ ಎಂ ಆಂತರ್ಯ, ಚಿತ್ರದುರ್ಗ, ಕವನದ ಶೀರ್ಷಿಕೆ: ಪುಸ್ತಕವಾಗಬೇಕು…

ಪುಸ್ತಕವಾಗಬೇಕು…📚

ಪುಸ್ತಕವಾಗಿಯಾದರು ನಿನ್ನ ಕೈ ಸೇರಬೇಕು
ನನ್ನ ಕಡೆ ತಿರುಗು ನೋಡದ ನಿನ್ನ ಕೊಬ್ಬಿದ ಕಣ್ಣುಗಳು
ದಾರಿಯಲ್ಲಿ ಬೇರಾರ ಕೈಲಿದ್ದಾಗ ನನ್ನ ಚಂದದ ಮುಖ ಮುಟವ ಕಂಡು
ಕೊಳ್ಳುವ ತವಕ ತರಿಸಬೇಕು

ಎದೆಯ ಭಾವಗಳ ಬಗ್ಗೆ ಕಿಂಚಿತ್ತೂ ಕರುಣೆ ಇರದ ನೀನು
ನವಿರಾದ ಪುಟ ತೆರೆದಾಗ ಸಾಲುಗಳಲಿನ ತೀವ್ರತೆಯ ಕಂಡು
ನಿನ್ನ ಮನವ ತಲ್ಲಣಿಸ ಬೇಕು

ಕಾಯುವಿಕೆಯ ಪರಿಚಯವೇ ಇಲ್ಲದಿರುವಳಿಗೆ
ಕೊನೆಯ ಪುಟದವರೆಗೂ
ಕಾತುರತೆಯ ಹೆಚ್ಚಿಸಬೇಕು

ಕೆಲವೊಮ್ಮೆ ಬೇಸರ ತರಿಸಿ
ಮತ್ತೊಮ್ಮೆ ಕಿರುನಗೆ ಮೂಡಿಸಿ
ನನ್ನ ಪ್ರೇಮ ಬಣ್ಣನೆಯ ನೀ ಭಾವಿಸಿಕೊಂಡು ಭಾವುಕಳಾಗಿಸಬೇಕು

ಈ ಪ್ರೀತಿ ಪ್ರೇಮವೆಲ್ಲ ಬರಿ ಗೋಳೆಂದುಕೊಂಡವಳಿಗೆ
ಪುಸ್ತಕ ಓದುವ ಗೀಳಾಗಿಸಬೇಕು

ನನ್ನೊಂದಿಗಿರುವ ಕ್ಷಣಗಳ ಕಲ್ಪನೆ ಇಲ್ಲದೆ ನೀನು
ಹೊಸ ಜಗ್ಗತ್ತನೆ ಸೃಷ್ಟಿಸಬೇಕು
ನಾನು ಪುಸ್ತಕವಾಗ ಬೇಕು …


-ತರುಣ್ ಎಂ ಆಂತರ್ಯ, ಚಿತ್ರದುರ್ಗ