ಬಳ್ಳಾರಿ, ಆ.10: ಕನ್ನಡದ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರಾಗಿರುವ ಡಾ. ರಾಜಶೇಖರ ನಿರಮಾನ್ವಿ ಅವರ ನೆನಪಿನ ಕಾರ್ಯಕ್ರಮ ನಗರದ ಬಿಪಿಎಸ್ ಕಾಲೇಜಿನ ಸಭಾಂಗಣದಲ್ಲಿ ಜರುಗಲಿದೆ.
ಬೆಂಗಳೂರಿನ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಮತ್ತು ನಗರದ ಲೋಹಿಯಾ ಪ್ರಕಾಶನದ ಸಹಯೋಗದಲ್ಲಿ ಕಾರ್ಯಕ್ರಮ ಜರುಗಲಿದ್ದು, ಬೆ.10-30 ಗಂಟೆಗೆ ಹಿರಿಯ ಕವಯತ್ರಿ ಶ್ರೀಮತಿ ಸವಿತಾ ನಾಗಭೂಷಣ ಅವರು ಚಾಲನೆ ನೀಡುವರು.
ಪ್ರತಿಷ್ಠಾನದ ಅಧ್ಯಕ್ಷೆ, ಕವಯತ್ರಿ ಶ್ರೀಮತಿ ಎಚ್ ಆರ್ ಸುಜಾತಾ ಅವರು ಅಧ್ಯಕ್ಷತೆ ವಹಿಸುವರು. ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ. ಶ್ರೀಮತಿ ಸರ್ವಮಂಗಳಾ ನಿರಮಾನ್ವಿ ಅವರು ಉಪಸ್ಥಿತರಿರುವರು.
ಮಾತುಕತೆ: ಬೆಳಗಿನ ಮಾತುಕತೆ ಕಾರ್ಯಕ್ರಮದಲ್ಲಿ ಡಾ. ರಾಜೇಂದ್ರ ಚೆನ್ನಿ, ಡಾ. ಪಿ. ಭಾರತಿ ದೇವಿ, ಮಧ್ಯಾಹ್ನದ ಮಾತುಕತೆಯಲ್ಲಿ ಡಾ.ಅಮರೇಶ ನುಗಡೋಣಿ, ಡಾ. ಚಿದಾನಂದ ಸಾಲಿ ಅವರು ಪಾಲ್ಗೊಳ್ಳಲಿದ್ದಾರೆ.
ಸಂಜೆ 4-30 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಚಂದ್ರಕಾಂತ ವಡ್ಡು ಅವರು ಭಾಗವಹಿಸುವರು ಎಂದು ಸಿ. ಚನ್ನಬವಣ್ಣ ಅವರು ತಿಳಿಸಿದ್ದಾರೆ.