ಬಳ್ಳಾರಿ, ಆ. 20: ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರಾ ಮಹೋತ್ಸವಗಳೊಂದಿಗೆ ಇಂಥಹ ಸಾಂಸ್ಕೃತಿಕ ಕಲೆಗಳು ಪ್ರದರ್ಶನಗೊಂಡರೆ ಅಳಿವಿನ ಅಂಚಿನಲ್ಲಿರುವ ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸಲು ಸಹಕಾರಿಯಾಗುತ್ತದೆ ಎಂದು ದರೂರಿನ ಕೊಟ್ಟೂರು ಸ್ವಾಮಿ ಮಠದ ಶ್ರೀ ಸಂಗನ ಬಸವೇಶ್ವರ ಸ್ವಾಮಿಗಳು ಅಭಿಪ್ರಾಯಪಟ್ಟರು.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಂದ್ಯಾಳು ಮಹಾದೇವ ತಾತ ಕಲಾಸಂಘದಿಂದ ಹಮ್ಮಿಕೊಂಡಿದ್ದ ‘ಶ್ರಾವಣ ಸಾಂಸ್ಕೃತಿಕ ಸಂಭ್ರಮ 2025 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಶ್ರೀ ಮಹಾದೇವ ತಾತ ಕಲಾ ಸಂಘ ಹಂದ್ಯಾಳು ಕಳೆದ ಎರಡು ದಶಕಗಳಿಂದ ಪೌರಾಣಿಕ, ಸಾಮಾಜಿಕ ಸಂದೇಶ ಸಾರುವ ನಾಟಕಗಳನ್ನು ಪ್ರದರ್ಶಿಸುವ ಮೂಲಕ ರಾಜ್ಯಾದ್ಯಂತ ಉತ್ತಮ ಹೆಸರು ಗಳಿಸಿದ್ದು, ಇನ್ನಷ್ಟು ಉತ್ತುಂಗಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಅತಿಥಿಗಳಾಗಿ ಭಾಗವಹಿಸಿದ್ದ ತುಂಗಭದ್ರ ರೈತ ಸಂಘದ ಅಧಕ್ಷ ಡಾ. ದರೂರು ಪುರುಷೋತ್ತಮಗೌಡ ಮಾತನಾಡಿ, ಇತೀಚಿನ ದಿನಮಾನಗಳಲ್ಲಿ ಗ್ರಾಮೀಣ ಕಲೆಗಳಾದ ಗಂಡು ಮೆಟ್ಟಿನ ಕಲೆ ಬಯಲಾಟಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು.ಆ ನಿಟ್ಟಿನಲ್ಲಿ ಹಂದ್ಯಾಳು ಪುರುಷೋತ್ತಮ ಅವರು ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮ ನಡೆಯುವುದರಿಂದ ದಾರಿ ತಪ್ಪುಯತ್ತಿರುವ ಯುವ ಪೀಳಿಗೆಯನ್ನು ಸರಿ ದಾರಿಗೆ ಕರೆದಯ್ಯಲು ಅನುಕೂಲವಾಗುತ್ತದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ನಡೆಯಬೇಕು. ಇದಕ್ಕೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು ಎಂದರು.
ಮಹಾದೇವತಾತಕಲಾಸಂಘದ ಅಧ್ಯಕ್ಷ ಪುರುಷೋತ್ತಮಹಂದ್ಯಾಳು, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ವನ್ನನಗೌಡರು, ತಾಲೂಕು ಉಪಾಧ್ಯಕ್ಷ ಜಾಲಿಹಾಳ್ ಶ್ರೀಧರ್ ಗೌಡ, ಕಗ್ಗಲ್ ಮಲ್ಲಾರೆಡ್ಡಿ, ಸಿರಿಗೇರಿ ಠಾಣೆ ಎಎಸ್‌ಐ ಅಂಕಲಯ್ಯ, ವೀರೇಶಯ್ಯ ಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತಿತರಿದ್ದರು,
ಗಾದಿಲಿಂಗಪ್ಪ ಅಮರಾಪುರ, ಕುಮಾರಗೌಡ ಅವರು ಗೀತಾ ಗಾಯನ ಪ್ರಸ್ತುತ ಪಡಿಸಿದರು.
ಸಿಆರ್‌ಪಿ ಎ.ರ‍್ರಿಸ್ವಾಮಿ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಸಿ, ಜನರನ್ನು ನಗೆಗಡಲಲ್ಲಿ ತೇಲಿಸಿದರು. .
ನಂತರ ನಡೆದ ದಿ. ಶಂಕರ್ ನಾಯ್ಡು ರಚನೆಯ ಪುರುಷೋತ್ತಮ ಹಂದ್ಯಾಳು ಅವರ ನಿರ್ದೇಶನದ “ದನಕಾಯೋರ ದೂಡ್ಡಾಟ”ಹಾಸ್ಯಮಯ ಸಂದೇಶಾತ್ಮಕ ನಾಟಕ ಪ್ರದರ್ಶನ ನಡೆಯಿತು. ಸಾರಥಿ ಪಾತ್ರದಲ್ಲಿ ಪುರುಷೋತ್ತಮ ಹಂದ್ಯಾಳು,
ಗಣಪತಿ ಪಾತ್ರದಲ್ಲಿ ಬಿ. ಚಂದ್ರಶೇಖರ್ ಆಚಾರ್, ದುರ್ಯೋಧನ ಪಾತ್ರದಲ್ಲಿ ಅಂಬರೀಶ್ ಹಚ್ಚೊಳ್ಳಿ, ದುಶ್ಯಾಸನ ಪಾತ್ರದಲ್ಲಿ ಪಾರ್ವತೀಶ್ ಗೆಣಿಕೆಹಾಳ್, ದ್ರೌಪದಿ ಪಾತ್ರದಲ್ಲಿ ಮೌನೇಶ್ ಕಲ್ಲಳ್ಳಿ, ದಾನಯ್ಯ ಸ್ವಾಮಿ ಕುರುಗೋಡು, ಜಿ. ಲಿಂಗಪ್ಪ ಹಂದ್ಯಾಳು ಕರ್ಚೇಡ ಚಂದ್ರನಾಯಕ ಅವರು ಅಭಿನಯಿಸಿ ನೆರೆದಿದ್ದ ಜನಸ್ತೋಮವನ್ನು ನಗೆಗಡಲಲ್ಲಿ ತೇಲಿಸಿತು.
ಹೊನ್ನೂರಸ್ವಾಮಿ ಶಂಕರಬಂಡೆ ಹರ‍್ಮೋನಿಯಂ, ಗಾದಲಿಂಗಪ್ಪ ಅಮರಾಪುರ ಅವರು ಮದ್ದಲಿ ಸಾಥ್ ನೀಡಿದರು.