ಗಂಗಾವತಿ ನವಜೀವನ ವೃದ್ಧಾಶ್ರಮಕ್ಕೆ ಲಯನ್ಸ್ ಕ್ಲಬ್ ವತಿಯಿಂದ ಬೆಡ್ ಶೀಟು, ಸೀರೆ ವಿತರಣೆ

ಗಂಗಾವತಿ:  ಲಯನ್ಸ್ ಕ್ಲಬ್ ಗಂಗಾವತಿ ಹಾಗೂ ವಸುಧಾ ಫೌಂಡೇಷನ್ ಹೈದರಾಬಾದ್ ಅವರ ಸಹಯೋಗದೊಂದಿಗೆ  ಇಲ್ಲನ ನವಜೀವನ ವೃದ್ದಾಶ್ರಮಕ್ಕೆ
40 ಬೆಡ್ ಶೀಟುಗಳು, ,80 ಸೀರೆ ಹಾಗೂ 50 ಬ್ರೇಡ್‌ ಬನ್ ಗಳನ್ನು  ಇತ್ತೀಚೆಗೆ ವಿತರಿಸಲಾಯಿತು.                          ಈ ಪುಣ್ಯ ಕಾರ್ಯದಲ್ಲಿ
ಲಯನ್ಸ್ ಕ್ಲಬ್ ಹಿರಿಯ ಸದಸ್ಯಗಳಾದ ಡಾ.ಚಂದ್ರಪ್ಪ , ಡಾ.ಸೋಮರಾಜು, ಡಾ.ಮಾದವಶೆಟ್ಟಿ,  ವಿರೂಪಾಕ್ಷಪ್ಪ ಸಿಂಗನಾಳ,  ಟಿ.ರಾಮಕೃಷ್ಣ ,  ಗುರು ಪ್ರಸಾದ್ ಹಾಗು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ.ಶಿವಕುಮಾರ್ ಮಾಲಿಪಾಟೀಲ್ ಭಾಗವಹಿಸಿದ್ದರು.
ನವಚೇತನ ವೃದ್ದಾಶ್ರಮದ ವ್ಯವಸ್ಥಾಪಕರಾದ ಆನಂದರಾವ್ ಉಪಸ್ಥಿತರಿದ್ದು , ಲಯನ್ಸ್ ಕ್ಲಬ್ ಹಾಗೂ ವಸುಧಾ ಫೌಂಡೇಷನ್ ಅವರಿಗೆ ವೃದ್ದಾಶ್ರಮ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
—–