Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಬಳ್ಳಾರಿಯಲ್ಲಿ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ: ಅನ್ನ ದಾಸೋಹ ಉತ್ತಮ ಕಾರ್ಯ -ಎಸ್ಪಿ ಡಾ. ಸುಮನ್ ಡಿ.ಪೆನ್ನಕರ್ ಪ್ರಶಂಸೆ - Karnataka Kahale

ಬಳ್ಳಾರಿಯಲ್ಲಿ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ: ಅನ್ನ ದಾಸೋಹ ಉತ್ತಮ ಕಾರ್ಯ -ಎಸ್ಪಿ ಡಾ. ಸುಮನ್ ಡಿ.ಪೆನ್ನಕರ್ ಪ್ರಶಂಸೆ

ಬಳ್ಳಾರಿ, ಜ. 23: ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ 7 ನೇ ಪುಣ್ಯ ಸ್ಮರಣೆಯ ಅಂಗವಾಗಿ ಅನ್ನ ದಾಸೋಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನಕರ್ ಅವರು ಪ್ರಶಂಸಿಸಿದರು.
ತ್ರಿವಿಧ ದಾಸೋಹಿಯಾಗಿದ್ದ ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ 7 ನೇ ಪುಣ್ಯ ಸ್ಮರಣೆಯ ಅಂಗವಾಗಿ ಮಠದ ಹಳೆಯ ವಿದ್ಯಾರ್ಥಿ ಬಳಗದಿಂದ ನಗರದ‌ ವಿಮ್ಸ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಪುಣ್ಯದ ಕಾರ್ಯದಲ್ಲಿ ತಾವು ಸಂತೋಷದಿಂದ ಭಾಗಿಯಾಗಿರುವುದಾಗಿ ಹೇಳಿದರು.

ಸಿದ್ಧಗಂಗಾ ಸೇವಾ ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ದಾಸೋಹ ದಿನದ ಸ್ಮರಣೆಯಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರ ಪಿ. ಗಾದೆಪ್ಪ, ಎಸ್ಪಿ ಡಾ. ಸುಮನ್ ಡಿ. ಪೆನ್ನಕರ್, ಈಶಾನ್ಯ ಟೈಮ್ಸ್ ಜಿಲ್ಲಾ ವರದಿಗಾರ ಸಿ.‌ಮಂಜುನಾಥ್, ಜನಪರ ಹೋರಾಟಗಾರ ರಾಯಚೂರಿನ ಅಂಬಣ್ಣ ಅರೋಲಿಕರ್, ಶಿವಲೀಲಾ ಚಿತ್ರದ ನಿರ್ದೇಶಕ ಅಶೋಕ್ ಜಯರಾಮ್, ಪತ್ರಕರ್ತ, ಸಂಘಟಕ ಬಂಗ್ಲೆ ಮಲ್ಲಿಕಾರ್ಜುನ, ಕೆಇಬಿ ಸೊಸೈಟಿಯ ವ್ಯವಸ್ಥಾಪಕ ತಿಮ್ಮರಾಜು ಎಂ, ಕನ್ನಡ ಉಪನ್ಯಾಸಕ, ದಸಾಪ ತಾಲೂಕು ಅಧ್ಯಕ್ಷ ಸಿಂಧನೂರಿನ ಡಾ.‌ಹುಸೇನಪ್ಪ ಅಮರಾಪುರ, ಚಿರಾಯು ವಾಹಿನಿಯ ಸಂಸ್ಥಾಪಕ ಡಾ. ಮಂಜುನಾಥ ಎನ್. ಶಿವಕ್ಕನವರ್, ಅಧ್ಯಾಪಕ ಶರಣಪ್ಪ,
ಜನಪದ ಗಾಯಕ ಜಡೇಶ್ ಎಮ್ಮಿಗನೂರು, ಅಕ್ಷಯ ಕಲಾ ಟ್ರಸ್ಟ್ ಅಧ್ಯಕ್ಷ ಎಚ್.ಜಿ. ಸುಂಕಪ್ಪ ಅವರಿಗೆ ಸಿದ್ಧಗಂಗಾ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಸ್ಟಾರ್ ನ್ಯೂಸ್ ಕನ್ನಡ ನವಾಜ್ ಮೀಡಿಯಾ ಸಂಪಾದಕ ಸಿ ಬಂದೇನವಾಜ್ ಸೇರಿದಂತೆ
13 ಜನರಿಗೆ ವಿಶೇಷ ಪ್ರಶಸ್ತಿ ‌ನೀಡಿ ಸತ್ಕರಿಸಲಾಯಿತು.
ಬಳಗದ ಅಧ್ಯಕ್ಷ ಶ್ರೀನಿವಾಸ ಮುಕುಂದ ಅವರನ್ನು ಮೇಯರ್ ಪಿ. ಗಾದೆಪ್ಪ ಸನ್ಮಾನಿಸಿದರು.
ಗಾಯನ: ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಕುರಿತು ತಾವೇ‌ ರಚಿಸಿದ ಗೀತೆಯನ್ನು ಅಂಬಣ್ಣ ಅರೋಲಿಕರ್, ಗಾಯಕ‌ ಜಡೇಶ್ ಎಮ್ಮಿಗನೂರು ಭಕ್ತಿ ಗೀತೆ ಹಾಡಿ ಗಮನ ಸೆಳೆದರು.
ಗಾಯಕ ವೀರೇಶ ದಳವಾಯ್, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಬಳಗದ ಅಧ್ಯಕ್ಷ ಕವಿ ಶ್ರೀನಿವಾಸ್ ಮುಕುಂದ ಸ್ವಾಗತಿಸಿದರು. ಎರಿಸ್ವಾಮಿ ನಿರೂಪಿಸಿ, ವಂದಿಸಿದರು.