ಅನುದಿನ ಕವನ-೧೭೨೮, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ:ಕಡ ಕೊಡುವುದಿಲ್ಲ!

ಕಡ ಕೊಡುವುದಿಲ್ಲ!

ನಮ್ಮ ದಾರಿಯನ್ನು ನಾವೇ ನಡೆಯಬೇಕು
ಯಾರೂ ಅವರ ಕಾಲುಗಳನ್ನು
ಕಡ ಕೊಡುವುದಿಲ್ಲ!

ಪ್ರೇಮವನ್ನಾದರೂ ಮೈದುಂಬಿ
ನಾವೇ ಉಸಿರಾಡಬೇಕು
ಯಾರೂ ಅವರ ಗಾಳಿಗೂಡುಗಳನ್ನು
ಕಡ ಕೊಡುವುದಿಲ್ಲ !

ನೊಂದು ಬೆಂದು ಬಸಿದು ಗಳಿಸಿ
ಇಳಿಸಿ ಹೊರಡಬೇಕು, ತಿಳಿವ ಅರಿವ ಕಣ್ಣ
ಯಾರೂ ಕಡ ಕೊಡುವುದಿಲ್ಲ!

ನಮ್ಮೊಳಗೆ ನಾವೇ ಇದ್ದೂ ಎಲ್ಲವ ಒದ್ದು
ಹಾರಿ ಹೋಗಬೇಕು ಯಾರೂ ಅವರ
ರೆಕ್ಕೆಗಳನ್ನು ಕಡ ಕೊಡುವುದಿಲ್ಲ!


-ಸವಿತಾ ನಾಗಭೂಷಣ, ಶಿವಮೊಗ್ಗ
—–