ಬಳ್ಳಾರಿಯಲ್ಲಿ ನ. 22 ಮತ್ತು 23ರಂದು ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟ -ಶಾಂತಾಬಾಯಿ ಕಟ್ಟಿಮನಿ

ಬಳ್ಳಾರಿ. ನ. 16: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಬಳ್ಳಾರಿ ಮತ್ತು ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಕರ್ನಾಟಕ  ಸಹಯೋಗದೊಂದಿಗೆ ನ. 22 ಮತ್ತು 23 ರಂದು   ಎರಡು ದಿನಗಳ ಕಾಲ ಹಿರಿಯರ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ನ ಬಳ್ಳಾರಿ ಜಿಲ್ಲಾ  ಅಧ್ಯಕ್ಷರಾದ ಶಾಂತಾಬಾಯಿ ಕಟ್ಟಿಮನಿ ಅವರು ತಿಳಿಸಿದರು.

ಅವರು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ  ಪತ್ರಿಕಾಗೋಷ್ಠಿಯನ್ನು  ಉದ್ದೇಶಿಸಿ ಮಾತನಾಡಿದರು.
ಕ್ರೀಡಾಕೂಟದಲ್ಲಿ 30 ರಿಂದ ನೂರು ವರ್ಷ ವಯಸ್ಸಿನ ಕ್ರೀಡಾಪಟುಗಳು ಭಾಗವಹಿಸಬಹುದು. ಐದು ವಿಭಾಗಗಳಲ್ಲಿ ಈ ಕ್ರೀಡಾಕೂಟವನ್ನು ನಡೆಸಲಾಗುತ್ತಿದ್ದು 100 ಮೀಟರ್ ನಿಂದ 5000 ಮೀಟರ್ ಓಟದ ಸ್ಪರ್ಧೆಗಳು ಎಸೆತ ಹಾಗೂ ಜಿಗಿತದ ಸ್ಪರ್ಧೆಗಳು ಹಮ್ಮಿಕೊಳ್ಳಲಾಗಿದೆ, 65 ವರ್ಷ ವಯಸ್ಸಿನ  ಸ್ಪರ್ದಾಳುಗಳಿಗೆ ಕೆಲವೊಂದು ಆಟಗಳನ್ನು ನಿಷೇಧಿಸಲಾಗಿದೆ, ವಿಕಲಚೇತನರಿಗೆ ಸಹ ಈ  ಕ್ರೀಡಾಕೂಟದಲ್ಲಿ  ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.
ಪ್ರತಿಸ್ಪರ್ಧೆಯಲ್ಲೂ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು. ಮತ್ತು ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಗೆದ್ದವರಿಗೆ ಡಿ. 13 ಮತ್ತು 14 ರಂದು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆಯುವ ದಕ್ಷಿಣ ಭಾರತದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಎಂದು‌ ಮಾಹಿತಿ ನೀಡಿದರು.
 ಕ್ರೀಡಾಕೂಟದಲ್ಲಿ ಸುಮಾರು 60 ರಿಂದ 70 ಜನ ತೀರ್ಪುಗಾರರು ಭಾಗವಹಿಸುವರು.
ರಾಜ್ಯ ಮತ್ತು ಜಿಲ್ಲಾ ಘಟಕದಿಂದ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ವಿವರಿಸಿದರು.
 ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅಧ್ಯಕ್ಷ ವೇಣುಗೋಪಾಲ್,  ಖಜಾಂಚಿ ಡಿ ಎಸ್ ದೊಡ್ಡಯ್ಯ,  ಜನರಲ್ ಸೆಕ್ರೆಟರಿ ನಾಗಭೂಷಣ್,  ವಿಜಯ್ ಅಬ್ದುಲ್ ಮುನಾಫ್  ಇದ್ದರು.