ಅನುದಿನ ಕವನ-೧೭೮೧, ಕವಿ: ಲೋಕಿ, ಬೆಂಗಳೂರು

* ವಿದಾಯಗಳು
ಪೂರ್ಣಗೊಳ್ಳುವುದಿಲ್ಲ
ನೆನಪುಗಳು ಕಾಡುವಾಗ

* ಪ್ರೀತಿಯನ್ನು
ಪೂರ್ಣ ನಂಬುಗೆಯೊಂದಿಗೆ
ಆಸ್ವಾಧಿಸಬಾರದು

* ವಿದಾಯಕ್ಕೂ ಮುನ್ನ
ಅಪ್ಪುಗೆಯೊಂದು
ಬಾಕಿ ಉಳಿದುಬಿಡುತ್ತದೆ

* ಕೊರಳಲ್ಲಿ ಉಳಿದ
ಹನಿಗಳನ್ನು ನಗುವೆಂಬ
ಅಣೆಕಟ್ಟು ಹಿಡಿದಿಟ್ಟುಕೊಂಡಿದೆ

* ಹಳತು ದಿನಗಳು
ಕ್ಯಾಲೆಂಡಿರಿನಲ್ಲಿಯೇ
ಕೆಂಪು ಶಾಯಿಯಲ್ಲಿ ಉಳಿದುಬಿಟ್ಟಿದೆ

* ಬದುಕಿನ ನಂಬಗೆಯೇ
ಉಸಿರು ನಿಲ್ಲಿಸಿದೆ
ಅವನೊಲವು ದೂರಾದ ಮೇಲೆ

* ಹೆಗಲು ಹೊರೆಯಾಗಲಿಲ್ಲ
ಭಾವಗಳು
ಭಾರವಾದದಷ್ಟೇ

-ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು