ಅನುದಿನ ಕವನ-೧೭೯೦, ಕವಿ: ಹಂದಿಕುಂಟೆ ನಾಗರಾಜ, ಸಿರಾ, ಕವನದ ಶೀರ್ಷಿಕೆ: ದಯವಿಟ್ಟು ಕ್ಷಮಿಸಿ

ದಯವಿಟ್ಟು ಕ್ಷಮಿಸಿ
ಈಗ..
ವಿಳಾಸ ಬದಲಾಗಿದೆ,
ಈ ಮೊದಲಿನಂತೆ
ನೀವು ಅಲ್ಲಿ ಹುಡುಕಬೇಡಿ ನನ್ನನ್ನು

ಬೇಕಂತಲೇ ಬದಲಾಯಿಸಿದ್ದಲ್ಲ,
ಬದಲಾವಣೆ ಜಗದ ನಿಯಮ
ಅಂತಾ ನೀವೇ ಹೇಳ್ತಿದ್ರಿ ತಾನೆ..!

ಕಾಲದ ಕೈಯಲ್ಲಿನ ಗಡಿಯಾರ
ನಡೆದಂತೆ‌, ನಾವೂ ಕೂಡಾ…

ನಮ್ಮ ದಾರಿ ಕೆಲವೊಮ್ಮೆ
ನಾವೇ ನಿರ್ಧರಿಸಬೇಕೆಂದೇನಿಲ್ಲ
ಬೇರೆಯವರೂ ತೋರಿಸಬಹುದು,
ಅಲ್ವಾ..?

ನೀವೇನೂ ತೀರಾ
ಬೇಜಾರಾಗಬೇಕಿಲ್ಲ,
ಒಂದೇ ಸಣ್ಣ ಕೂಗು ಸಾಕು
ನಿಮ್ಮ ಕಾಲಿಗೇ ತೊಡರು ಬೀಳುತ್ತೇನೆ,
ಮೊದಲಿನಂತೆಯೇ ಉಪದ್ರವಿ ನಾನು,(ಬದಲಾಗಲಿ ಹೇಗೆ)

ಒಮ್ಮೆ ಇತ್ತಲೂ ಬನ್ನಿ,
ಅಂದಂಗೆ ಏನು ಗೊತ್ತಾ
ಈ ಕಡೆಯೂ ಒಳ್ಳೇ ಚಹಾ
ಸಿಗುತ್ತಂತೆ‌, ಸ್ನೇಹಿತರು ಹೇಳುತ್ತಿದ್ದರು.

ಬರಬೇಕಾದಾಗ
ನೆನಪಿರಲಿ ನಿಮ್ಮ ಮುಂದಿನ ನಿಲ್ದಾಣ,
ಬಾಗಿಲುಗಳು ಎಡಕ್ಕೆ ತೆರೆಯುತ್ತವೆ.

ಮತ್ತೊಮ್ಮೆ ಸಿಗೋಣ‌
ಮುದವಿದ್ದರೆ..?

-ಹಂದಿಕುಂಟೆ ನಾಗರಾಜ, ಸಿರಾ
—–

One thought on “ಅನುದಿನ ಕವನ-೧೭೯೦, ಕವಿ: ಹಂದಿಕುಂಟೆ ನಾಗರಾಜ, ಸಿರಾ, ಕವನದ ಶೀರ್ಷಿಕೆ: ದಯವಿಟ್ಟು ಕ್ಷಮಿಸಿ

Leave a Reply

Your email address will not be published. Required fields are marked *