‘ವಂದೇ ಮಾತರಂ’ಗೆ ಗೌರವ: ಮಾದರಿಯಾದ ಸಚಿವ ಪ್ರಿಯಾಂಕ್ ಖರ್ಗೆ


ಬೆಳಗಾವಿ, ಡಿ.9:  ಸೋಮವಾರ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭವಾಯಿತು.              ಕಲಾಪ ಆರಂಭಕ್ಕೂ ಮುನ್ನ, ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಧಾನ ಪರಿಷತ್‌ ಪ್ರವೇಶಿಸುವ ಸಂದರ್ಭದಲ್ಲಿ ‘ವಂದೇ ಮಾತರಂ’ ಗೀತೆ ಹಾಡುವುದು ಕೇಳಿಬಂತು. ಕೂಡಲೇ ಸದನದ ಹೊರಗೆ ನಿಂತು ರಾಷ್ಟ್ರೀಯ ಗೀತೆಗೆ ಗೌರವ ಸಲ್ಲಿಸಿದ ಸಚಿವರು, ತಮ್ಮ ಜೊತೆಯಲ್ಲಿದ್ದ ಇತರರಿಗೂ ನಿಲ್ಲುವಂತೆ ಸೂಚಿಸಿದರು. ಇದು ನಿಜವಾದ ದೇಶಭಕ್ತಿ, ದೇಶದ ಪ್ರತಿಯೊಬ್ಬರೂ ಸಲ್ಲಿಸಬೇಕಾದ ನಿಜವಾದ ಗೌರವ ಎಂದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.