ಕಲಾವಿದರ ಬದುಕು ಹಸನಾಗಲು ದಾನಿಗಳ ಔದಾರ್ಯ ಅತ್ಯಗತ್ಯ -ಟಿ ಹೆಚ್ ಎಂ ಬಸವರಾಜ

ಬಳ್ಳಾರಿ, ಡಿ.20: ದುಸ್ತರವಾದ ಕಲಾವಿದರ ಬದುಕು ಹಸನಾಗಲು ದಾನಿಗಳ ಔದಾರ್ಯ ಅತ್ಯಗತ್ಯ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷರಾದ ಟಿ ಹೆಚ್ ಎಂ ಬಸವರಾಜ  ಅವರು ಹೇಳಿದರು.           ನಗರದ ಶ್ರೀಶೈಲ ಬ್ರಮರಾಂಬಿಕ ಮಲ್ಲಿಕಾರ್ಜುನ ಸ್ವಾಮಿ ಶಿವ ದೀಕ್ಷಾ ಮಂದಿರದಲ್ಲಿ ಅಲಾಪ್ ಸಂಗೀತ ಕಲಾ ಟ್ರಸ್ಟ್, ಬಳ್ಳಾರಿ ಇವರು ಹಮ್ಮಿಕೊಂಡ ಸಾಂಸ್ಕೃತಿಕ ಕಲರವ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು ಕಲಾವಿದರು,  ಸಂಘ ಸಂಸ್ಥೆಗಳು, ಕಲಾವಿದರಿಗೆ ಧನ‌ಸಹಾಯ ನೀಡುವಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಯಮಗಳನ್ನು ಸರಳೀಕರಿಸಬೇಕು ಎಂದು ತಿಳಿಸಿದರು. ಇಲಾಖೆ ಕೇಳುವ ದಾಖಲೆಗಳನ್ನು ಅವಿದ್ಯಾವಂತ ಕಲಾವಿದರು ಕೊಡುವುದು ಬಹಳ ಕಷ್ಟ  ಎಂದರು.        ಕಲೆ ನಮ್ಮ ಬದುಕನ್ನು ರೂಪಿಸುತ್ತದೆ ಜೀವನದಲ್ಲಿ ಮನರಂಜನೆ ಅವಶ್ಯಕ ಒಂದು ನಾಟಕ ಬಯಲಾಟಗಳನ್ನು ಆಡಬೇಕೆಂದರೆ ಸಾವಿರಾರುಗಟ್ಟಲೆ ಹಣಬೇಕಾಗುತ್ತದೆ ಹೀಗೆ ಆದರೆ ಮುಂದೊಂದು ದಿನ ಕಲಾವಿದರು ತಮ್ಮ ಕಲೆಯನ್ನೇ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.                          ಸರಕಾರ ಕಲಾವಿದರ ಮಾಸಾಶನವನ್ನು ಕನಿಷ್ಠ 5000 ರೂ. ಗಳಿಗೆ ಹೆಚ್ಚಿಸ ಬೇಕು ಹಾಗೂ  ದಾನಿಗಳು ಕಲಾಪೋಷಕರು ಆರ್ಥಿಕ ಸಹಾಯ ನೀಡಲು ಮುಂದೆ ಬರಬೇಕೆಂದು ಟಿ ಹೆಚ್ ಎಂ ಬಸವರಾಜ್  ವಿನಂತಿಸಿದರು.

 

ಅಧ್ಯಕ್ಷತೆ ವಹಿಸಿದ್ದ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳು ರವರು ಮಾತಾನಾಡಿ ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸಂಘ ಸಂಸ್ಥೆಗಳು ಮಾಡಲು ಮುಂದಾಗಬೇಕು ಹಾಗು ಎಲೆ ಮರೆಯ ಕಾಯಿಯಂತಿರುವ ಕಲಾವಿದರನ್ನು ಗುರುತಿಸಿ ಗೌರವಿಸಬೇಕೆಂದರು.
ತಮ್ಮ ಕಲೆಯ ಅನುಭವವನ್ನು ಹಂಚಿಕೊಂಡರು.
ಎನ್ ಬಸವರಾಜ್ ಮತ್ತು ತಂಡದವರು ವಚನ ಗಾಯನ ಮಾಡಿದರು.
ಜಡೇಶ್ ಎಮ್ಮಿಗನೂರ್ ಮತ್ತು ತಂಡದವರು ಜಾನಪದ ಹಾಡುಗಳನ್ನು ಹಾಡಿದರು.ಸಂಗೀತ ಕಾರ್ಯಕ್ರಮಕ್ಕೆ
ಕಿ-ಬೋರ್ಡ್ ಶಿವಕುಮಾರ್ ಹಾಗೂ ಸುಧಾಕರ ತಬಲ ಸಾಥ್ ನೀಡಿದರು. ನಂತರ ವೈ. ಪ್ರಭು ಮತ್ತು ತಂಡದವರಿಂದ ‘ಪುಣ್ಯಕೋಟಿ’ ತೊಗಲು ಗೊಂಬೆಯಾಟದ ಪ್ರದರ್ಶನ ನಡೆಯಿತು.

    ಕುಮಾರಿ ಸಾಯಿ ಶೃತಿ ಹಂದ್ಯಾಳ್ ಪ್ರಾರ್ಥಿಸಿದರು. ಗಾಯಕ ಜಡೇಶ ಎಮ್ಮಿಗನೂರು ಅವರು ಸ್ವಾಗತಿಸಿ ನಿರೂಪಿಸಿದರು ವೇದಿಕೆಯ ಮೇಲೆ ದೇವಸ್ಥಾನದ ಅಧ್ಯಕ್ಷರಾದ ಕೆ ರಾಜಶೇಖರ್ ಗೌಡ ಮತ್ತುವತೊಗಲುಗೊಂಬೆ ಕಲಾವಿದ ಕೆ ಹೊನ್ನೂರ್ ಸ್ವಾಮಿ ಉಪಸ್ಥಿತರಿದ್ದರು.

ಅಲಾಪ್ ಸಂಗೀತ ಕಲಾ ಟ್ರಸ್ಟ್ ಅಧ್ಯಕ್ಷರಾದ ರಮಣಪ್ಪ ಭಜಂತ್ರಿ ಅತಿಥಿಗಳನ್ನು ಸನ್ಮಾನಿಸಿ ಕೊನೆಯಲ್ಲಿ ವಂದಿಸಿದರು.
ಈ ಸಂದರ್ಭದಲ್ಲಿ ನಾಗನಗೌಡ, ಲಾಲ್ ರೆಡ್ಡಿ, ಕಂಡಕ್ಟರ್ ಪೊಂಪಪತಿ, ಅರುಣ್ ಗುರುನಾಥ್ ಭಟ್ ಉಪಸ್ಥಿತರಿದ್ದರು.