
ಬೆಂಗಳೂರು.ಜ.25: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ (ಕೋಲಾರ) ನೂತನ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿರುವ ಪ್ರೊ. ಬಿ.ಕೆ ರವಿ ಅವರನ್ನು ಬೆಂಗಳೂರು ವಿವಿಯ ಸಂವಹನ ವಿಭಾಗದಲ್ಲಿ ಮುಖ್ಯಸ್ಥರಾದ ಡಾ.ಬಿ ಶೈಲಶ್ರೀ ಅವರು ಸನ್ಮಾನಿಸಿ ಗೌರವಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪತ್ರಿಕೋದ್ಯಮ ವಿಭಾಗ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಡಾ. ಜೆ ಎಂ ಚಂದುನವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರೊ. ಬಿ.ಕೆ. ರವಿ ಅವರು ಪತ್ರಿಕೋದ್ಯಮ ವಿಭಾಗದ ಹೆಮ್ಮೆ ಎಂದು ಸಂತಸಪಟ್ಟರು. ಹಲವಾರು ಏಳು ಬೀಳುಗಳ ಪ್ರಸಂಗದ ಘಟನೆಗಳನ್ನು ಮೆಲುಕು ಹಾಕಿದರು.
ಇದೇ ಸಂದರ್ಭದಲ್ಲಿ ಇತಿಹಾಸ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರು ಪ್ರೊ. ನಾಗರತ್ನಮ್ಮ, ಸಹಾಯಕ ಪ್ರಾಧ್ಯಾಪಕರು ಡಾ. ವಸುಂದ್ರ ಪ್ರಿಯದರ್ಶಿನಿ ಮಹಾದೇವ್, ಡಾ. ಪ್ರಶಾಂತ ವೇಣುಗೋಪಾಲ್, ಡಾ. ಷಣ್ಮುಖಪ್ಪ ಕೆ, ಬೊಧಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ಸಂಶೋಧನಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
