… she tasted him as he tasted her
ನಿನ್ನ ಪುಟ್ಟ ಕಣ್ಣುಗಳಲ್ಲಿ ಅದೆಷ್ಟು ಏಕಾಂತಗಳು ಅಡಗಿವೆ? ಕವಿತೆ
ಕಾಣದ ಲೋಕ ನಿನ್ನ ಕಣ್ಣಲ್ಲಿವೆ, ಎಂದೆ.
ನನ್ನ ದನಿಯನ್ನು ಬೆಚ್ಚಗೆ ತನ್ನ ಕಣ್ಣಲ್ಲಿ ಅಡಗಿಸಿ-
ಇಡುತ್ತ, ನನ್ನತ್ತ
ಮುಖವೆತ್ತಿ ನೋಡಿದಳು.
ಅವಳ
ಕಣ್ಣಲ್ಲಿ ದೀಪಗಳು ಉರಿಯುತ್ತಿದ್ದವು.
ಅವಳತ್ತ ನೋಡಿದೆ;
ನನ್ನ ಮಂದ ಕಣ್ಣಿಗಿಳಿಯಿತು ಹೊಳೆವ ಬೆಳಕು,
ಚುಂಬಿಸಿದೆ,
ಅವಳ ಮಿದು ತುಟಿಗಳ ವಿನ್ಯಾಸಕ್ಕೆ ಸೋತು-
ಹೋದವು ನನ್ನ ತುಟಿ;
ಕಡಗೋಲು
ಮೊಸರು ಕಡೆದಂತೆ ಕಡೆದು, ಮಥಿಸಿ
ಎಲುಬು, ಸ್ನಾಯುಗಳೆಲ್ಲ ಕರಗಿ
ದ್ರವ ರೂಪಿ.
ಕವಿತೆ
ಅವಳನ್ನು ನೋಡುತ್ತಿದ್ದರೆ, ಅವಳ ಕಣ್ಣಲ್ಲಿ
ಬರೀ ಪ್ರಶ್ನೆಗಳು…

-ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು
