Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೧೮೬೯, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ನೈಜತೆಯ ಪ್ರೀತಿ - Karnataka Kahale

ಅನುದಿನ ಕವನ-೧೮೬೯, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ನೈಜತೆಯ ಪ್ರೀತಿ

ನೈಜತೆಯ ಪ್ರೀತಿ

ಹುಡುಕಿದೆ ದಾರೀ ಪ್ರೀತಿಯ ಪಟಾರೆಗಳಲಿ ಆದರೂ ಆಗಾಗ ಮುನಿಸಿ
ಆಚೆ ಈಚೆ ತಡಬಡಿಸಿದೆ ..

ಕಾಣದ ಪ್ರೀತಿ ಗೆ ಎಷ್ಟೊಂದು ಅಹವಾಲು ಸೋಲುತ್ತಿದೆ ಗೊತ್ತಿಲ್ಲದ ನಿಜ ಪಯಣಕೆ ಕವಿತೆಯ ಪ್ರೀತಿ ಸಾಲು ಹೃದಯದ ಬಡಿತಕೆ ಮುಟ್ಟುತಿದೆ

ಕಲಾಮಿನ ಇಂಕು ..

ಅದ್ಯಾವ ಪರಿಯೋ ಕಾಣೆ ಮಂಜ ಮುಸುಕಿಗೆ ಎರಡು ಹೃದಯ ಸಜ್ಜಾಗಿ ಹತ್ತಿರ ಗೊಳ್ಳಲು ಕಣ್ಣ ಪಿಸು ಮಾತು ಕಣ್ಣಂಚಿನ ಕಾಡಿಗೆಯೊಳು ಕನ್ನಡಿಯ ಬಿಂಬ ತೋರಿಸುತಿದೆ ..

ಮನದ ಭಾರವ ಇಳಿಸುತ ತುಸುನಗೆಯ ಶಾಯರಿಯೊಳು ಗೆದ್ದಿದೆ ಪ್ರೀತಿಯ ಸಂಕೋಲೆ ಇದಕೆ ಯಾರ ಹಂಗೂ ಇಲ್ಲ ..
ಬರೀ ಪ್ರೇಮದ ಟಿಖಾಣಿ ಹೊರ ಜಗತ್ತಿಗೆ ಕರೆದೊಯ್ಯಲು ಅಚ್ಚಾಗಿ ಚಾಪುಗೊಲ್ಲಳು ಬೇಡ ಎಂದಿದೆ ನೈಜತೆಯ ಪ್ರೀತಿ ..

ಯಾವುದನ್ನು ಎತ್ತಿ ತೋರೋಣ ಪ್ರೀತಿಯನೋ ಪ್ರೀತಿಸುವ ಹೃದಯದ ನಿಜ ನೋವನ್ನೋ ಅರಿಯೆ ಸಂದರ್ಭ ಎಲ್ಲದನ್ನು ಮರೆಸಿ ಮೆರೆಸಿ ನಡೆಸುವಾಗ ಮೇಲಿನ ಔಚಿತ್ಯ ..ಎಲ್ಲದಕ್ಕೂ

ಸಿದ್ಧಾವಾಗಿದೆ ಇದು ಗಟ್ಟಿತನದ ನಾಣ್ಯ ಕರೆಯ ಸೆಳೆತಕೆ ಮಸ್ಜಿದು ತ್ಯಾಗದ ಸೌಮ್ಯತೆ ತಲೆ ಎತ್ತಿ ಮೌನಂಗೊಂಡಿದೆ ..

ಆದ್ರೂ ಖುಷಿಯಿಂದ ಖುದಾ ಹರಸುತ್ತಿದ್ದಾನೆ ಎರಡು ಪ್ರೀತಿಗಳನ್ನು ಸೇರಿಸಲು ..ಈ ಘಮ್ಯ ಒಗ್ಗಟ್ಟಿಗೆ

ಮನ್ನತ್ತಿನ ನಂಬಿಕೆಯ ದಾರ ಹೊಂಗಿರಣದ ಕಿರಣವ ಸೂಚಿಸಿ ನೋಡ ನೋಟವ ಹತ್ತಿರ ಸೆಳೆದೊಯ್ಯುದು ನೋವ ಪರಿದೆಯಾ ಸರಿಸಿ ಹಸನ್ಮುಖಿಯಾಗಿಸಿದೆ …ಲೇಖನಿಯಿಂದ

ಬರೆದ ಪ್ರೀತಿಯ ಅಕ್ಷರುಗಳು ಬರೀ ಮಾರಾಟಕ್ಕೆ ಎಡೆಗೂಡದೆ ಎದೆಯ ಸದ್ದನ್ನು ಬಡೆಯಲಿ ನೈಜತೆಯ ಪ್ರೀತಿ ಸಾವಿನೊಳು ಕೊನೆಯಾಗದೆ ಮುಂಬರುವ ಹೊಸ ಅಂಶಕೆ ಮಾದರಿಯಾಗಿದೆ …

ಇದು ಬರೀ ಪ್ರೇಮ ಪರ್ವವಲ್ಲ ಹೊತ್ತೊತ್ತಿಗೂ ಎಚ್ಚರಿಸುವ ಗಡಿಯಾರದ ಪ್ರೀತಿ ಬಿಂದು ಇದಕೆ ನೂರಾರು ಭಾವನೆ ಮಿಡಿದು ಯಾರದೋ ಬಿಕ್ಕಟ್ಟಿಗೆ ಗೋಡೆಗಳ ಮೇಲೆ ನೆನಪಿನ ಹೆಸರಾದವು ಆದರೂ ಪ್ರೀತಿಯ ಪರಿ ಯಾವತ್ತಿಗೂ ಒಂದೇ ನೊಂದ ನೆನಪಿನ ದೋಣಿಗೆ ಸಿಹಿಯಾದ ಔತಣದ ಗುಟುಕು ..ಇದು ಬರೀ ವಯಸ್ಸಿನ

ಗುಂಗಲ್ಲ ಬೆಸೆಯುವ ಕಾಲದ ಪರಿದಿ ಅಂದಿಗೂ ಇಂದಿಗೂ ಎಂದೆಂದಿಗೂ ಹೊಸತನದ ರೂಪ. ..

ಇಡೀ ಜೀವನವೇ ನೈಜ ಪ್ರೇಮದೊಳು
ಹೃದಯದಿ ಬಚ್ಚಿಟ್ಟು ಬದುಕುವ ಹೂವನ್ನು ಹೊಸಕದೆ ಪೋಶಿಸಿ ಅದಕ್ಕೆ
ಪ್ರೀತಿಯ ಹೂ ಎರಚಿ ಸದ್ದಿಲ್ಲದೆ ಚಿರ ನಿದಿರೆಗೆ ಜಾರಿದೆ ತಣ್ಣ ಮಣ್ಣೊಳು ಮಲಗಲು

-ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ವಿಜಯನಗರ ಜಿ.