Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅನಿಲ್ ಎಚ್.ಎ. ಆಯ್ಕೆ - Karnataka Kahale

ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅನಿಲ್ ಎಚ್.ಎ. ಆಯ್ಕೆ

ಚಿಕ್ಕಮಗಳೂರು:  ಚಿಕ್ಕಮಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-2028 ರ ಸಾಲಿನ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜ್ಯ ಚುನಾವಣೆ ನಡೆದ ಸಂಧರ್ಭದಲ್ಲಿ ರಾಜ್ಯಕಾರ್ಯಕಾರಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ಒಂದು ಹುದ್ದೆ ಅವಿರೋಧವಾಗಿ ಆಯ್ಕೆಯಾಗಿತ್ತು.
ಉಳಿದ ಪದಾಧಿಕಾರಿಗಳ ಹುದ್ದೆಗೆ ಕೆಲ ನಾಮಪತ್ರ ತಿರಸ್ಕೃತವಾಗಿದ್ದರೆ, ಹಲವು ಹುದ್ದೆಗಳಿಗೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪತ್ರಕರ್ತರ ಸಭೆ ನಡೆಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಜವಬ್ದಾರಿಯನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ, ಕೆಯುಡಬ್ಲ್ಯೂಜೆ ರಾಜ್ಯ ಉಪಾಧ್ಯಕ್ಷರಾದ ಎಚ್.ಬಿ.ಮದನಗೌಡ ಅವರಿಗೆ ನೀಡಿ, ಕೆಯುಡಬ್ಲ್ಯೂಜೆ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು.
ಮುಖ್ಯಚುನಾವಣಾಧಿಕಾರಿ ರವಿಕುಮಾರ್ ಟೆಲೆಕ್ಸ್ ಅವರ ಸಲಹೆಯನ್ನು ಪಡೆದುಕೊಳ್ಳಲಾಗಿತ್ತು.
ಈ ನಿಟ್ಟಿನಲ್ಲಿ ಚಿಕ್ಕಮಗಳೂರಿನಲ್ಲಿ ಸಭೆ ನಡೆಸಿ ಸದಸ್ಯರ ಸಹಮತದ ಮೇರೆಗೆ ಅನಿಲ್ ಎಚ್.ಎ. ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆ KUWJ ಘಟಕದ ನೂತನ ಪದಾಧಿಕಾರಿಗಳು ವಿವರ:

ಅಧ್ಯಕ್ಷರು :
ಅನಿಲ್ ಹೆಚ್. ಎ.
ಪ್ರಧಾನ ಸಂಪಾದಕರು, ಭೂಮಿ ಟಿವಿ
ಚಿಕ್ಕಮಗಳೂರು

ಉಪಾಧ್ಯಕ್ಷರು :
(ಅವಿರೋಧ ಆಯ್ಕೆ)
ಬಿ.ಎನ್. ನಾಗರಾಜ್
ಸಂಪಾದಕರು, ಸತ್ಯಪ್ರಭ
ತರೀಕೆರೆ

ಪ್ರಧಾನ ಕಾರ್ಯದರ್ಶಿ
ಚೇತನ್ ಬಿ.ಪಿ.
ಜಿಲ್ಲಾ ವರದಿಗಾರರು, ವಿಜಯಕರ್ನಾಟಕ
ಚಿಕ್ಕಮಗಳೂರು

ಖಜಾಂಚಿ:
ಅಕ್ಷಯ್ ಕುಮಾರ್
ಸಂಪಾದಕರು, ಪಿತಾಮಹ ದಿನ ಪತ್ರಿಕೆ
ಚಿಕ್ಕಮಗಳೂರು

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು
(ಅವಿರೋಧ ಆಯ್ಕೆ)
ಕಲ್ಯಾಣ್ ಕುಮಾರ್ ಕೆ.ಕೆ.
ಸಂಪಾದಕರು
ಐಸಿರಿ ಪ್ರಾದೇಶಿಕ ದಿನಪತ್ರಿಕೆ
ಚಿಕ್ಕಮಗಳೂರು