ಗಜಲ್
ನನ್ನೆದುರು ಕುಳಿತು ಮಾತನಾಡು ಸಾವೇ ದೂರ ಸರಿಯದಿರುಕಣ್ಣಲ್ಲಿ ಕಣ್ಣಿಟ್ಟು ನುಡಿದುಬಿಡು ಸಾವೇ ದೂರ ಸರಿಯದಿರು
ಒಳಿತು ಕೆಡುಕುಗಳ ಮೇಲಾಟದಲ್ಲಿ ಸೋತುಹೋಗಿರುವೆನುಅಂತರಂಗವ ತೆರೆದು ಹೇಳಿಬಿಡು ಸಾವೇ ದೂರ ಸರಿಯದಿರು
ಬೆಳಗಲೆಂದೇ ಹಚ್ಚಿಟ್ಟ ಹಣತೆ ನಾನು ಉರಿವುದೊಂದೇ ಗೊತ್ತುಅಹಮಿರದೆ ಬೆಳಗುವದ ತಿಳಿಸಿಬಿಡು ಸಾವೇ ದೂರ ಸರಿಯದಿರು
ನಿನ್ನೆದುರೇ ನಳನಳಿಸುತ್ತ ಬೆಳೆದು ತಲೆಬಾಗದಂತೆ ಹೆಮ್ಮರವಾದೆನೆಲದ ಬೇರನರಿವುದ ಕಲಿಸಿಕೊಡು ಸಾವೇ ದೂರ ಸರಿಯದಿರು
ಬದುಕಿನಲಿ ಗೆದ್ದವರೆಲ್ಲರು ಜಿಗಿದು ಗಗನದ ತಾರೆಗಳಾದರಂತೆ ಸಿದ್ಧಸಾವಿನಲೂ ಬದುಕುವುದ ಅರುಹಿಬಿಡು ಸಾವೇ ದೂರ ಸರಿಯದಿರು

-ಸಿದ್ಧರಾಮ ಕೂಡ್ಲಿಗಿ
—–
