“ಹಾಗೆ ಒಂದು ಹಾಸ್ಯಗವನ – ಕೇವಲ ನಗುವಿಗಾಗಿ. ನಗುತ್ತಿರಿ.. ನಗಿಸುತ್ತಿರಿ.. ಹೊಟ್ಟೆ ಹುಣ್ಣಾಗಿಸುವ ನಗೆಗವಿತೆ. “ಬೆಳ್ಳಗಿರುವುದೆಲ್ಲ ಹಾಲಲ್ಲ. ನಾವು ಕೇಳಿದ್ದೆಲ್ಲ ನಿಜವಲ್ಲ. ಕಲ್ಪಿಸಿದ್ದೆಲ್ಲ ಸತ್ಯವಾಗಿರುವುದೆಲ್ಲ.” ಎನ್ನುವುದಕ್ಕೆ ಈ ನಗೆಗವಿತೆ ಅಪ್ಪಟ ನಿದರ್ಶನ. ಅಕ್ಕಪಕ್ಕದ ಈ ಅನುಭವ ನಿಮಗೂ ಆಗಿರಬಹುದು. ಪಕ್ಕದ್ಮನೆ ಪದ್ಮಿನಿಯಂತವರ ಪರಾಕ್ರಮ ದರ್ಶನವೂ ಆಗಿರಬಹುದು. ಏನಂತೀರಾ.?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
“ಸದ್ದು – ಗುದ್ದು..!”
ಪಕ್ಕದ್ಮನೆ ಪದ್ಮಿನಿಯ
ಕೇಳಿದರು ಕಮಲಾಕ್ಷಿ..!
“ಅದೇನು ನಿನ್ನೆರಾತ್ರಿ
ಭಾರಿ ಜಗಳ-ಗಲಾಟೆ
ನಿಮ್ಮ ಮನೆಯಲಿ?
ಅದೇಕಷ್ಟು ಕಟಿಪಿಟಿ??”
ಪದ್ಮಿನಿ ಉತ್ತರಿಸಿದರು..
“ಕುಡಿದು ಬಂದಿದ್ದರು
ನಮ್ಮ ಮನೆಯವರು
ಅದಕ್ಕೇ ಆ ಜಟಾಪಟಿ!”
ಕಮಲಾಕ್ಷಿ ಉದ್ಗರಿಸಿದರು
“ನಿಮ್ಮ ಗಂಡ ಕುಡಿಯುತ್ತಾರಾ.?!
ಕುಡಿದು ಬಂದಿದ್ದಲ್ಲದೆ
ಜಗಳವಾಡಿ ಹೊಡೆಯುತ್ತಾರಾ..??!
ಅಬ್ಬಾ! ಅದೇನು ರಾದ್ದಾಂತ
ಕೆನ್ನೆಗೆ ಬಾರಿಸುತ್ತೇನೆ
ತಲೆಗೆ ಕುಟ್ಟುತ್ತೇನೆ
ಬೆನ್ನಿಗೆ ಗುದ್ದುತ್ತೇನೆ
ಎಂದೆಲ್ಲಾ ಹೇಳಿ-ಹೇಳಿ
ಹೊಡೆಯುತ್ತಾರಾ..???” ಎಂದರು.!
ಪದ್ಮಿನಿ ತಲೆತಗ್ಗಿಸಿ
ಶಾಂತವಾಗಿ ನುಡಿದರು..
“ಕುಡಿದು ಬಂದಾಗಲೆಲ್ಲ
ನಮ್ಮಲ್ಲಿ ಇದೇ-ಫಜೀತಿ.!
ನಮ್ಮಿಬ್ಬರ ನಡುವಿನ
ಒಪ್ಪಂದದ ರೀತಿ-ಪ್ರತೀತಿ.!
ಹೊಡೆಯುತ್ತೇನೆ ಎಂದು
ಹೇಳುತ್ತಾ.. ಹೇಳುತ್ತಾ..
ಕಿರುಚುವುದು ಅವರು.!
ಹೊಡೆಯುವವಳು ನಾನು..”!!!

-ಎ.ಎನ್.ರಮೇಶ್. ಗುಬ್ಬಿ
