ಸಂಬಂಧಗಳು
ಸಂಬಂಧಗಳು
ಎರಡು ಮೌನಗಳ ನಡುವೆ
ಸೇತುವೆ ಕಟ್ಟುವ ಪ್ರಯತ್ನ
ಕೆಲವು ರಕ್ತದಲ್ಲಿ
ಜನ್ಮತಃ ಬರುತ್ತವೆ
ಕೆಲವು ಹೃದಯದಲಿ
ತಾನಾಗಿ ಮೊಳಕೆಯೊಡಿಯುತ್ತವೆ…..
ಕೆಲವು ಕಾಲದಾಚೆಗೂ
ಜ್ಯೋತಿಯಾಗಿ ಬೆಳಗುತ್ತವೆ
ಕೆಲವು ಕ್ಷಣದಲ್ಲಿ
ಹೊಗೆಯಾಗಿ ಕರಗುತ್ತವೆ……
‘ನಮ್ಮವರು’ ಎಂದು
ಕರೆಯುವ ದನಿಗಳಿವೆ
ಹತ್ತಿರ ಬಂದೊಡನೆ
ಪರಕೀಯವಾಗುವ ಮುಖಗಳಿವೆ…..
ಮಾರುಕಟ್ಟೆಯಲ್ಲಿ
ಹಣಕ್ಕೆ ಸಿಗುವ ಸಂಬಂಧಗಳಿವೆ
ಹಣವಿಲ್ಲದೆಯೇ
ಅಮೂಲ್ಯವಾಗುವ ಬಂಧಗಳಿವೆ…..
ಬೆಸೆಯದೆಯೂ
ಬೆಸೆದುಕೊಂಡ ನಂಟುಗಳಿವೆ
ಬೆಸೆದರೂ
ಬಿಚ್ಚಿ ಹೋಗುವ ಎಳೆಗಳಿವೆ…..
ಸಂಬಂಧವೆಂದರೆ
ಜೊತೆಗಿರುವುದಲ್ಲ
‘ಇಲ್ಲದೆಯೂ ಜೊತೆಗೆ ಇರುವುದು ‘

-ರಜನಿ ಕಾಂಬ್ಳೆ, ಬೆಳಗಾವಿ
