ಬಳ್ಳಾರಿ, ಸೆ.18: ಹನ್ನೆರಡನೇ ಶತಮಾನದ ಶಿವಶರಣ, ಕಾಯಕಯೋಗಿ ಶ್ರೀ ಸೊನ್ನಲಿಗೆಯ ಸಿದ್ಧರಾಮ ಶಿವಯೋಗಿಯ ಜೀವನ ದರ್ಶನದ ಕುರಿತಾದ ಪುರಾಣ ಪ್ರವಚನ ಕಾರ್ಯಕ್ರಮ ಗಡಿ ಭಾಗದ ದಂಡಿನ ಹಿರೇಹಾಳು ಗ್ರಾಮದ ಕೋಟೆ ಪ್ರಾಂತ್ಯದಲ್ಲಿ ಒಂದು ತಿಂಗಳ ಕಾಲ ಅದ್ದೂರಿಯಾಗಿ ಜರುಗಿತು. ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಇತ್ತೀಚೆಗೆ ಶ್ರದ್ಧಾ ಭಕ್ತಿಗಳಿಂದ ತೆರೆ ಎಳೆಯಲಾಯಿತು.
ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳು ನಿರಂತರವಾಗಿ ಜರುಗಿದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ನಾಡಿನ ಹರ ಗುರು ಚರಮೂರ್ತಿಗಳಾದ ಷ : ಬ್ರ: ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹೆಬ್ಬಾಳು, ಷ:ಬ್ರ: ಚೆನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಪಾಲ್ತೂರು ಯಾಳ್ಪಿ, ಶ್ರೀ ವಾಮದೇವ ಶಿವಾಚಾರ್ಯ ಮಹಾಸ್ವಾಮಿಗಳು, ಹಂಪಿ ಸಾವಿರ ದೇವರಮಠ, ಎಮ್ಮಿಗನೂರು ಮ:ನಿ:ಪ್ರ: ಶ್ರೀ ಕಲ್ಯಾಣ ಮಹಾಸ್ವಾಮಿಗಳು ಸಂಸ್ಥಾನ ಮಠ ಕಮರಚೇಡು ಬಳ್ಳಾರಿ. ಷ:ಬ್ರ: ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು, ಪಂಚವಣಿಗೆ ಮಹಾಸಂಸ್ಥಾನಮಠ ಹರಗಿನಡೋಣಿ, ಪೂಜ್ಯರು ದಿವ್ಯ ಸಾನಿಧ್ಯ ವಹಿಸಿ ಧರ್ಮೋಪದೇಶ ಸಂದೇಶ ನೀಡಿದರು.
ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ಪುರಾಣ ಪ್ರವಚನಕಾರರಾಗಿ ನಗರದ ಇಂಡೋ ಅಮೆರಿಕನ್ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಸವರಾಜ ಅಮಾತಿ ಅವರು ಸಂಗೀತ ಮತ್ತು ಪುರಾಣ ಪಠಣಕಾರರಾಗಿ, ಜಗನ್ನಾಥ ಗವಾಯಿಗಳು ಡಿ ಹಿರೇಹಾಳು, ತಬಲವಾದಕರಾಗಿ ಯೋಗೀಶ್ ಬಣಗಾರ ಸಂಗನಕಲ್ಲು ಇವರ ಸಾರಥ್ಯದಲ್ಲಿ ಪುರಾಣ ಪ್ರವಚನವು ಕಾರ್ಯಕ್ರಮ ನೆರವೇರಿಸಿದರು.
ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಗ್ರಾಮದ ಕೋಟೆ ಮತ್ತು ಪೇಟೆ ಪ್ರಾಂತ್ಯದ ಹಾಗೂ ಸುತ್ತಮುತ್ತಲಿನ ಗ್ರಾಮದ ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
