ಸಮಾಜಮುಖಿ ಸೂಲಗಿತ್ತಿ ಹೆಚ್. ಆದೆಮ್ಮ ವಿಧಿವಶ

ಬಳ್ಳಾರಿ, ಸೆ.25: ಐದು ಸಾವಿರಕ್ಕೂ ಹೆಚ್ಚು ಯಶಸ್ವಿ ಹೆರಿಗೆ ಮಾಡಿಸಿದ್ದ ಸೂಲಗಿತ್ತಿ ಹೆಚ್. ಆದೆಮ್ಮ ಅವರು ಗುರುವಾರ ಸ್ಥಳೀಯ ಶ್ರೀನಗರದ ತಮ್ಮ ನಿವಾಸದಲ್ಲಿ ನಿಧನರಾದರು.
ಅವರಿಗೆ 95 ವರ್ಷವಾಗಿತ್ತು.
ಅಳಿಯ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದ, ಪತ್ರಿಕಾ ಛಾಯಾಗ್ರಹಕ ಪುರುಷೋತ್ತಮ ಹಂದ್ಯಾಳ್, ಐವರು ಪುತ್ರರು, ಆರು‌ ಜನ ಪುತ್ರಿಯರು, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಶುಕ್ರವಾರ ಮಧ್ಯಾಹ್ನ ತಾಳೂರು ರಸ್ತೆಯ ಹರಿಶ್ಚಂದ್ರ ‌ನಗರದ ರುದ್ರಭೂಮಿಯಲ್ಲಿ ಅಂತಿಮ‌ ಸಂಸ್ಕಾರ ‌ನೆರವೇರಿತು.
ನಿಸ್ವಾರ್ಥ ಸಮಾಜ ಸೇವೆಯನ್ನು ಪರಿಗಣಿಸಿ ಸುವರ್ಣ ವಾಹಿನಿ 2014ರಲ್ಲಿ ಆದೆಮ್ಮ ಅವರಿಗೆ ಪ್ರತಿಷ್ಠಿತ ಸುವರ್ಣ ವಾರ್ಷಿಕ‌ ಮಹಿಳೆ ಪ್ರಶಸ್ತಿ ‌ನೀಡಿ ಗೌರವಿಸಿತ್ತು.
ಗುಲ್ಬರ್ಗಾ ವಿವಿ ಮಾಜಿ‌ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ. ಮಂಜುನಾಥ ಸೇರಿದಂತೆ ‌ಹಲವು ಗಣ್ಯರು ಸಮಾಜ‌ಮುಖಿ‌ ಆದೆಮ್ಮ ಅವರಿಗೆ ಅಂತಿಮ ನಮನ ಸಲ್ಲಿಸಿ‌ ಸಂತಾಪ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *