ಅನುದಿನ ಕವನ-೨೦೧೬, ಕವಯತ್ರಿ: ಭಾರತಿ ಅಶೋಕ್, ಹೊಸಪೇಟೆ

ತುಟಿ
ಮೀರದ ಮಾತುಗಳು
ಎದೆಯೊಳಗೆ ಸಮಾಧಿಯಾಗುತ್ತಿವೆ

ಕೆಲವೊಮ್ಮೆ
ಮಾತುಗಳು ದ್ವನಿಯಾಗದೇ
ಭಾವ ಸಮಾಧಿಯೊಳಗೆ ಮಿಸುಕಾಡುತ್ತಲೇ
ಬದುಕನ್ನು ಗೆಲ್ಲಿಸಿ ಬಿಡುತ್ತವೆ

ಆಗೀಗ
ಹೀಗೆ ಸಮಾಧಿಯಾದ ಮಾತುಗಳು
ಒಟ್ಟಾಗಿ ಸಮಾಲೋಚಿಸುತ್ತವೆ
ತಾವು ದ್ವನಿ ಆಗದಿದ್ದುದರ ಫಲಶೃತಿಗೆ ರೋಧಿಸುತ್ತವೆ

ಆದರೂ
ಸಮಾಧಿಯೊಳಗೆ ಜಾತಕ ಪಕ್ಷಿಯಂತೆ
ಕಾಯುತ್ತಲೇ ಇರುತ್ತವೆ ನಿಡುಗಾಲದಿ
ಎಂದಾದರೊಂದು ದಿನ ದ್ವನಿಯಾಗಬಹುದೆಂದು


-ಭಾರತಿ ಅಶೋಕ್, ಹೊಸಪೇಟೆ

Leave a Reply

Your email address will not be published. Required fields are marked *