ಕವಿತೆ…..
ಬಿಟ್ಟು ಬಿಡದೆ ಕಾಡುತಿದೆ
ಚಿತ್ತ ಎತ್ತೊ ಓಡುತಿದೆ
ಮತ್ತೆ ಮತ್ತೆ ಕೆದಕುತಿದೆ
ಬಿಡದೆ ಅದ ಹುಡುಕುತಿದೆ
ಗೀಚಲೆಳೆಸುತಿದೆ ಮನದ ಕವಿತೆಯ
ಕಣ್ಣ ಎವೆಯ ನೆರಳಲ್ಲಿ
ಹತ್ತು ಕನಸುಗಳ ಹಾರಾಟ
ಮನಸಿನ ಸಾಮ್ರಾಜ್ಯದಲಿ
ಬಿಟ್ಟು ಬಿಡದ ಕಾರುಬಾರು
ಸಿಗದ ದಾರಿಯಲ್ಲಿ ಕವಿತೆ ಓಡುತಿದೆ
ಮುಂಜಾವಿನ ಮಂಜಿನಲ್ಲಿ
ಇಬ್ಬನಿಯ ಸಿಂಚನದಲಿ
ಹಿಂದೆ ಹೊರಳಿ ನೋಡುತಲಿ
ಅಂತವಿಲ್ಲದ ಸಂತೆಯಲಿ
ಏನು ಎತ್ತರಿಯದೆ ಕವಿತೆ ಮೌನವಾಗಿದೆ
ಅಲೆಯಾಗಿ ತೇಲಿ ಬಂದು
ನೆಲೆಯಿಲ್ಲದ ತಾವಲ್ಲಿ ನೆಲೆಯ-
-ನರಸೊ ಜೀವದ ಉಸಿರಿಗೆ
ಧ್ವನಿ ನಾ ಎಂದೊಮ್ಮೆ ನಕ್ಕು
ನಿರಾಳವಾಗಿ ಮೌನ ತೊರೆಯಿತು ಕವಿತೆ!!

-ಸರೋಜಿನಿ ಪಡಸಲಗಿ
ಬೆಂಗಳೂರು
